ಬೆಂಗಳೂರು: ಬಾಡಿಗೆ ಮನೆಯಲ್ಲಿರುವವರಿಗೂ ಗೃಹಜ್ಯೋತಿ ಸೌಲಭ್ಯ ದೊರೆಯುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಡ ಹಾಗೂ ಮಧ್ಯಮ ಕುಟುಂಬಗಳ ನೆರವಿಗಾಗಿ ಗೃಹಜ್ಯೋತಿ ಮತ್ತು ಗೃಹಲಕ್ಷ್ಮಿ ಯೋಜನೆಗಳನ್ನು ಜಾರಿಗೊಳಿಸಲಾಗಿದ್ದು, ಮನೆ ಹಾಗೂ ವಿದ್ಯುತ್ ಸಂಪರ್ಕದ ಮೀಟರ್ ಸಂಖ್ಯೆ ಯಾರ ಹೆಸರಿನಲ್ಲೇ ಇರಲಿ ವಾಸವಿರುವ ಬಾಡಿಗೆದಾರರು ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.
ಅಲ್ಲದೇ ಶ್ರೀಮಂತರು, ಅನುಕೂಲಸ್ಥರು ಗೃಹಜ್ಯೋತಿ ಸೌಲಭ್ಯವನ್ನು ತ್ಯಾಗ ಮಾಡಲು ಅವಕಾಶವಿದೆ. ಸರ್ಕಾರಿ ನೌಕರರಿಗೆ 35,000 ರೂ. ಮೇಲ್ಪಟ್ಟ ವೇತನಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ. ಅಂತಹವರು ತಮ್ಮ ತೆರಿಗೆಯ ವಿನಾಯಿತಿಗಾಗಿ ಗೃಹಜ್ಯೋತಿ ಸೌಲಭ್ಯ ತ್ಯಾಗ ಮಾಡುವ ಸಾಧ್ಯತೆ ಇದೆ ಎಂದರು.