ಬೆಂಗಳೂರು: ನ. 1ರ ಬಳಿಕ ಯಾವ ದಿನವಾದರೂ ಸರಿ, ಬಹಿರಂಗ ಚರ್ಚೆಗೆ ಸಮಯ ನಿಗದಿಪಡಿಸಿ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಬಹಿರಂಗ ಚರ್ಚೆಗೆ ಒಪ್ಪಿಗೆ ಸೂಚಿಸಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನವೆಂಬರ್ 1ರ ನಂತರ “ಎನೀ ಟೈಮ್ ಚರ್ಚೆಗೆ ಟೈಮ್ ಫಿಕ್ಸ್ ಮಾಡಿ. ನಾನು ಏನು ಮಾಡಿದ್ದೇನೆ, ಅವರೇನು ಮಾಡಿದ್ದಾರೆ ಅನ್ನೋದನ್ನು ಅಲ್ಲೇ ಬಿಚ್ಚಿ ಮಾತಾಡೋಣ. ಗಾಳಿಯಲ್ಲಿ ಗುಂಡು ಹೊಡೆಯೋದು, ಹಿಟ್ ಆಂಡ್ ರನ್ ಮಾಡೋದಲ್ಲ” ಸಮಯ ಫಿಕ್ಸ್ ಮಾಡಿ. ಅಲ್ಲಿ ಬಂದು ಎಲ್ಲವನ್ನೂ ಮಾತಾಡೋಣ ಎಂದರು.