ಕಲಬುರಗಿ: ರೈಲು ನಿಲ್ದಾಣದ ಗೋಡೆಗೆ ಹಚ್ಚಲಾಗಿರುವ ಹಸಿರು ಬಣ್ಣವನ್ನು ಬದಲಾಯಿಸಬೇಕು ಎಂದು ಆಗ್ರಹಿಸಿ ಹಿಂದೂ ಗುಂಪುಗಳ ಪ್ರತಿಭಟನೆ ಬೆನ್ನಲ್ಲೆ, ರೈಲ್ವೆ ಇಲಾಖೆಯು ರೈಲು ನಿಲ್ದಾಣದ ಗೋಡೆಗೆ ಪುನಃ ಬಣ್ಣ ಬಳಿಯಲು ನಿರ್ಧರಿಸಿದ್ದು, ಬಣ್ಣ ಬಳಿಯಲಾಗುತ್ತಿದೆ. ಕಲಬುರಗಿ ರೈಲು ನಿಲ್ದಾಣಕ್ಕೆ ಈ ಹಿಂದೆ ಹಸಿರು ಬಣ್ಣವನ್ನು ಬಳಿಯಲಾಗಿತ್ತು. ಇದಕ್ಕೆ ಹಿಂದೂ ಪರ ಸಂಗಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಈ ಬಣ್ಣದಿಂದ ರೈಲು ನಿಲ್ದಾಣ ಮಸೀದಿ ರೀತಿಯಲ್ಲಿ ಕಾಣಿಸುತ್ತಿದೆ ಎಂದು ಆರೋಪಿಸಿದ್ದರು.