ಚಿಕ್ಕಮಗಳೂರು: ಬಜೆಟ್‌ನಲ್ಲಿ 7 ವಿಶೇಷಗಳಿಗೆ ಆದ್ಯತೆ ನೀಡಲಾಗಿದೆ. ಇದರಲ್ಲಿ ಕಟ್ಟಕಡೆಯ ಮನುಷ್ಯನಿಗೆ ತಲುಪುವ ಯೋಜನೆಗಳಿಗೆ ಆದ್ಯತೆ ನೀಡಲಾಗಿದೆ ಎಂದು ಶಾಸಕ ಸಿ.ಟಿ. ರವಿ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿರುವ ಅವರು, 9 ಬಜೆಟ್‌ಗಳಂತೆ ಈ ಬಾರಿ ಕೂಡ ದೂರದೃಷ್ಟಿ, ದೇಶದ ಹಿತದೃಷ್ಟಿಯುಳ್ಳ ಬಜೆಟ್ ಮಂಡಿಸಿದ್ದಾರೆ. ಬಡವರಿಗೆ ಬಲ ನೀಡುವ ಬಜೆಟ್ ಇದಾಗಿದೆ. ಇದು ಯವ ಸಮುದಾಯ, ಮೂಲಸೌಕರ್ಯ, ಪರಿಸರ ಸ್ನೇಹಿ ಬಜೆಟ್ ಆಗಿದೆ. ಆದಾಯ ತೆರಿಗೆ ರಿಯಾಯಿತಿ, ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನವನ್ನು ನೀಡಲಾಗಿದೆ. ಬಡವರಿಗೆ ಬಲ ನೀಡುವ ಬಜೆಟ್ ಇದಾಗಿದ್ದು, ಪ್ರಧಾನ ಮಂತ್ರಿಗಳಿಗೆ, ಕೇಂದ್ರ ಹಣಕಾಸಿನ ಖಾತೆ ಸಚಿವೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಿ.ಟಿ ರವಿ ಹೇಳಿದರು.