ಬಜರಂಗಬಲಿ ಆಕ್ರೋಶಕ್ಕೆ ಕಾಂಗ್ರೆಸ್ ಸುಟ್ಟು ಬೂದಿಯಾಗುತ್ತೆ

pralhad joshi
Advertisement

ಹುಬ್ಬಳ್ಳಿ : ಬಜರಂಗದಳ ನಿಷೇಧ ಮಾಡುತ್ತೇವೆ ಎಂದು ಕಾಂಗ್ರೆಸದ ಪಕ್ಷ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ಬಳಿಕ ರಾಜ್ಯವಷ್ಟೇ ಅಲ್ಲ; ದೇಶವ್ಯಾಪಿ ಆಕ್ರೋಶ ವ್ಯಕ್ತವಾಗುತ್ತಿದೆ. ಬಜರಂಗಬಲಿ ಆಕ್ರೋಶಕ್ಕೆ ಕಾಂಗ್ರೆಸ್ ಪಕ್ಷ ಸುಟ್ಟು ಬೂದಿಯಾಗುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜರಂಗದಳ ಸಂಘಟನೆ ಒಂದು ರಾಷ್ಟ್ರೀಯ ಚಿಂತನೆಯುಳ್ಳ ಮತ್ತು ನಮ್ಮ ಸಂಸ್ಕೃತಿ, ಪರಂಪರೆ ರಕ್ಷಣೆಯ ಬದ್ಧತೆಯುಳ್ಳ ಸಂಘಟನೆ. ಈ ಸಂಘಟನೆಯನ್ನು ಪಿಎಫ್ಐ ನಂತಹ ರಾಷ್ಡ್ರವಿರೋಧಿ ಸಂಘಟನೆ ಜೊತೆಗೆ ಹೋಲಿಸಿದ್ದಾರೆ. ಕೆಪಿಸಿಸಿಐ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಜರಂಗದಳ ನಿಷೇಧ ಮಾಡಿಯೇ ತಿರುತ್ತೇವೆ ಎಂದು ಹೇಳುತ್ತಿದ್ದರೆ, ಇನ್ನು ಕೆಲ ಕಾಂಗ್ರೆಸ್ ನಾಯಕರು ಪಶ್ಚಾತಾಪದ ರೀತಿ ಹೇಳಿಕೆ ನೀಡಿದ್ದಾರೆ. ಏನೇ ಆಗಲಿ. ಕಾಂಗ್ರೆಸ್ ಪಕ್ಷ ಇದಕ್ಕೆ ಬೆಲೆ ತೆರಲೇಬೇಕಾಗುತ್ತದೆ ಎಂದು ಜೋಶಿ ಕಿಡಿಕಾರಿದರು. ಪಿಎಫ್ಐ ಸಂಘಟನೆಯೊಂದಿಗೆ ಬಜರಂಗದಳ ಹೋಲಿಕೆ ಮಾಡ್ತಾರೆ. ಇಂಥವರನ್ನು ರಾಜ್ಯದ, ದೇಶದ ಜನ ಹೇಗೆ ಸಹಿಸಿಕೊಳ್ತಾರೆ. ಮನೆಗೆ ಕಳಿಸ್ತಾರೆ ಎಂದು ವಾಗ್ದಾಳಿ ನಡೆಸಿದರು.