ತವರಿನಲ್ಲಿ ಹೊಸ ಅಧ್ಯಾಯ ಬರೆದ RCB
ಬೆಂಗಳೂರು: ಪ್ಲೇ-ಆಫ್‌ಗೆ ಆರ್‌ಸಿಬಿ ‘ರಾಯಲ್’ ಎಂಟ್ರಿ ಕೊಟ್ಟಿದೆ. ಇಂದು ಐಪಿಎಲ್ 2024 ರ 68 ನೇ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ರುತುರಾಜ್ ಗಾಯಕ್ವಾಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇನ್ನು ಮೊದಲ ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡವು ನಿಗದಿತ 20 ಓವರ್‌ಗೆ 5 ವಿಕೆಟ್ ನಷ್ಟಕ್ಕೆ 218 ರನ್‌ಗಳನ್ನು ಕಲೆಹಾಕಿತು. ಈ ಬೃಹತ್ ಮೊತ್ತ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಗದಿತ 20 ಓವರ್‌ಗಲಲ್ಲಿ 7 ವಿಕೆಟ್ ನಷ್ಟಕ್ಕೆ 191 ರನ್ ಗಳಿಸುವ ಮೂಲಕ 27 ರನ್ ಗಳಿಂದ ಸೋಲನ್ನಪ್ಪಿತು. ಸರ್ವಾಂಗೀಣ ಪ್ರದರ್ಶನದಿಂದಾಗಿ ಆರ್‌ಸಿಬಿ ಪ್ಲೇ-ಆಫ್‌ಗೆ ತಲುಪಿದೆ.