`ಪ್ರೇಮಲೋಕ 2’ಬಗ್ಗೆ ಬಿಗ್ಅ‌ಪ್‌ಡೇಟ್‌ ಕೊಟ್ಟ ಕ್ರೇಜಿ ಸ್ಟಾರ್

Advertisement

ಬೆಂಗಳೂರು: ಒಂದು ವಾರದಲ್ಲಿ ದೊಡ್ಡ ನ್ಯೂಸ್ ಕೊಡ್ತೀನಿ ಎಂದು ಕನ್ನಡ ಚಿತ್ರರಂಗದ ಕನಸುಗಾರ ಕ್ರೇಜಿ ಸ್ಟಾರ್ ರವಿಚಂದ್ರನ್ ಹೇಳಿದ್ದಾರೆ.
ಬೆಂಗಳೂರಿನ ಡಾ. ರಾಜ್ ಕುಮಾರ್ ರಸ್ತೆಯ ಮನೆಯಲ್ಲಿ ಅವರ ಮನೆಯ ಎದುರು ಅಭಿಮಾನಿಗಳೊಂದಿಗೆ ಜನುಮದಿನ ಆಚರಿಸಿಕೊಂಡಿದ್ದಾರೆ, ಬಳಿಕ ಮಾಧ್ಯಮಗಳ ಜೊತೆ ಮಾತನಾಡಿರುವ ಅವರು ಬರ್ತ್‌ಡೇ ಆಚರಿಸುವದೇ ಇವರಿಗಾಗಿ ಅಭಿಮಾನಿಗಳಿಗಾಗಿಯೇ ಈ ಸಂಭ್ರಮ ನಾ ಹುಟ್ಟಿರುವುದೇ ನಿಮಗಾಗಿ, ಅಭಿಮಾನಿಗಳಿಗಾಗಿ ಎಂದಿರುವ ಅವರು ಈಗ ನಗು ಶುರು ಆಗಿದೆ ಈ ಜಡ್ಜಮೆಂಟ್‌ನಿಂದ ನಗು ಸುರುಆಗಿದೆ ಹಾಗಾಗಿ ಬರ್ತ್​ಡೇ ಸಂಭ್ರಮ ಎಂದರು, ಬಹು ನಿರೀಕ್ಷತ ಪ್ರೇಮಲೋಕ-2 ಏಕೆ ಇಂದು ಅನೌನ್ಸ್ ಮಾಡುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು ಎಲ್ಲಾ ಜಂಬಲ್‌ ಆಗುವುದು ಬೇಡ ಎಂದು ಅನೌನ್ಸ್ ಮಾಡಿಲ್ಲ, ಪ್ರೇಮಲೋಕ ಸೀಕ್ವೆಲ್​ಗೆ ಟ್ರೇಲರ್ ರೆಡಿ ಇದೆ. ಗಜಿಬಿಜಿ ಆಗೋದು ಬೇಡ ಅಂತ ಇಂದು ಲಾಂಚ್ ಮಾಡಲಿಲ್ಲ. ಇನ್ನೊಂದು ಹತ್ತು ದಿನದಲ್ಲಿ ಒಂದು ವಾರದಲ್ಲಿ ದೊಡ್ಡ ನ್ಯೂಸ್ ಕೊಡ್ತೀನಿ ಎಂದರು.