ಹುಬ್ಬಳ್ಳಿ: ಕಿರೆಸೂರು ಗ್ರಾಮದ ಅಗಸನಹಳ್ಳ ಪ್ರವಾಹದಿಂದ ಹಾನಿಯಾದ ರೈತರ ಜಮೀನುಗಳಿಗೆ ಕೇಂದ್ರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಿರೇಸೂರು ಗ್ರಾಮದ ನಿಂಗನಗೌಡ ಎಸ್. ರಾಯನಗೌಡ್ರ ಅವರ 1.25 ಎಕರೆ ಪ್ರದೇಶದಲ್ಲಿ ಹಾನಿಯಾದ ಹತ್ತಿ ಬೆಳೆ ವೀಕ್ಷಣೆ ಮಾಡಿದರು.
ಬಾನಪ್ಪಗೌಡ ರಾಯನಗೌಡ್ರ ಹೊಲದಲ್ಲಿ ಬೆಳೆದ ಹೆಸರು ಬೆಳೆ ಹಾನಿಯಾಗಿರುವುದನ್ನು ವೀಕ್ಷಿಸಿದರು. ಸಿ.ಎಂ. ಹುಲಿಕಟ್ಟಿ ಅವರ ಹೊಲದಲ್ಲಿ ಉದ್ದು ಹಾನಿಯಾಗಿರುವುದನ್ನು ವೀಕ್ಷಿಸಿದರು.
ರೈತರು ಕೇಂದ್ರ ತಂಡದ ಎದರು ತಮ್ಮ ಅಳಲನ್ನು ತೋಡಿಕೊಂಡರು. ಹೆಸರು ಬೆಳೆ ಖರೀದಿ ಮಾಡುವಲ್ಲಿ ಕೂಡ ವಿಳಂಬವಾಗಿರುವುದರಿಂದ ರೈತರು ತೊಂದರೆ ಅನುಭವಿಸುವಂತಾಗಿದೆ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೇರಿದಂತೆ ಇತರರು ಇದ್ದರು.