ಅಂತಾರಾಷ್ಟ್ರೀಯ ಮಟ್ಟದ ಗಾಯಕಿ ಅಮೆರಿಕದ ಮೇರಿ ಬಿಲ್ ಮೆನ್ ಭಾರತದ ರಾಷ್ಟ್ರಗೀತೆಯನ್ನು ವಾಷಿಂಗ್ಚನ್ ಡಿಸಿಯ ರೊನಾಲ್ಡ್ ರೇಗನ್ ಕಟ್ಟಡದಲ್ಲಿ ನಿನ್ನೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ನೆರೆದಿದ್ದ ಜನಸಮೂಹದ ಮಧ್ಯೆ ಹಾಡಿ ಜನಮನಸೂರೆಗೊಂಡರು. ಬಳಿಕ ಗಾಯಕಿ ಪ್ರಧಾನಿ ಮೋದಿಯವರ ಪಾದಗಳನ್ನು ಮುಟ್ಟಿ ನಮಸ್ಕರಿಸಿದ್ದು ಭಾರೀ ಮೆಚ್ಚುಗೆಗೆ ಪಾತ್ರವಾಗಿದ್ದು ವಿಡಿಯೊ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಒಬ್ಬ ಕರುಣೆ ಉಳ್ಳಂತಹ ವ್ಯಕ್ತಿ. ನಾನು ಅವರೊಂದಿಗೆ ಇಲ್ಲಿರುವುದು ನನಗೆ ತುಂಬಾ ಹೆಮ್ಮೆಯಾಗಿದೆ. ಇಷ್ಟೊಂದು ಜನರ ನಡುವೆ ಭಾರತದ ರಾಷ್ಟ್ರಗೀತೆಯನ್ನು ಹಾಡಿರುವುದು ನನಗೆ ಖುಷಿ ನೀಡಿದೆ ಎಂದಿದ್ದಾರೆ.