ಪ್ರಧಾನಿ ಮೋದಿ, ನನ್ನ ಅಭಿವೃದ್ಧಿ ಕೆಲಸಗಳೇ ನನಗೆ ಶ್ರೀರಕ್ಷೆ

ಕುಮಠಳ್ಳಿ
Advertisement

ಅಥಣಿ: ಪಕ್ಷಾಂತರದಿಂದ ಅಥಣಿ ಜನರಲ್ಲಿ ಉಂಟಾದ ಗೊಂದಲಗಳಿಗೆ ಮತದಾರರು ಸರಿಯಾದ ತೀರ್ಪು ನೀಡುತ್ತಾರೆ. ನಾನು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಜನರ ಬಳಿ ಹೋಗಿ ತೋರಿಸ್ತೀನಿ, ಹುಟ್ಟುವ ಮುನ್ನ ಯಾವುದೇ ಜಾತಿ ಗೊತ್ತಿರಲ್ಲ, ನಾನೊಬ್ಬ ಲಿಂಗಾಯತ ಸಮುದಾಯದ ಶಾಸಕನಾಗಿ ಇಲ್ಲಿಯವರೆಗೆ ಜಾತ್ಯತೀತವಾಗಿ ಕೆಲಸ ಮಾಡಿದ್ದೇನೆ ಮುಂದೆಯೂ ಮಾಡುವೆ ಎಂದು ಹೇಳಿದರು.
ಅಥಣಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಹೇಶ್ ಕುಮಠಳ್ಳಿ ಸೋಮವಾರ ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮತಕ್ಷೇತ್ರದಲ್ಲಿ ಬಿಜೆಪಿ ನಾಯಕರ ಪ್ರಚಾರಕ್ಕೆ ಇನ್ನೂ ಸಮಯವಿದೆ. ರಾಜ್ಯ, ರಾಷ್ಟ್ರಮಟ್ಟದ ನಾಯಕರು ಬರಲಿದ್ದಾರೆ. ಅಲ್ಲಿವರೆಗೆ ಸ್ಥಳೀಯರನ್ನು ಕರೆದುಕೊಂಡು ಪ್ರಚಾರ ಮಾಡುತ್ತೇವೆ ಎಂದರು.
ಮೋದಿಯವರು ದೇಶದಲ್ಲಿ ಮಾಡಿದ ಕಾರ್ಯಗಳನ್ನು ಹಾಗೂ ನಾನು ಕ್ಷೇತ್ರದಲ್ಲಿ ಮಾಡಿರುವ ಕೆಲಸ ಮುಂದೆ ಇಟ್ಟುಕೊಂಡು ಮತ ಕೇಳುವೆ ಎಂದ ಅವರು, ನನಗೆ ಮತ್ತೊಂದು ಬಾರಿ ಸ್ಪರ್ಧಿಸಲು ಬಿಜೆಪಿ ವರಿಷ್ಠರು ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು. ಚುನಾವಣೆಯಲ್ಲಿ ಗೆಲುವು ಸಾಧಿಸುವ ವಿಶ್ವಾಸ ಇದೆ ಎಂದರು.