ಪ್ರತಿ ಮನೆಯಲ್ಲಿ ರಾಮಜ್ಯೋತಿ ಬೆಳಗಲಿ

Advertisement

ಅಯೋಧ್ಯಾ: ಐತಿಹಾಸಿಕ ರಾಮ್ ಲಲ್ಲಾ ಪ್ರಾಣ ಪ್ರತಿಷ್ಠಾನ ಕಾರ್ಯಕ್ರಮಕ್ಕೆ ಇಡೀ ಜಗತ್ತು ಕಾಯುತ್ತಿದೆ. ಆದರೆ ಜನರು ಅಯೋಧ್ಯೆಗೆ ಬರುವುದು ಬೇಡ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.
ನಗರದಲ್ಲಿ ನವೀಕೃತ ರೈಲು ನಿಲ್ದಾಣ ಹಾಗೂ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ ಬಳಿಕ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇಡೀ ಜಗತ್ತು ಜನವರಿ 22ರ ಐತಿಹಾಸಿಕ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿದೆ. ಇಂತಹ ಸಂದರ್ಭದಲ್ಲಿ ಅಯೋಧ್ಯೆಯ ಜನರಲ್ಲಿ ವಿಪರೀತ ಉತ್ಸಾಹ ಮೂಡುವುದು ಸಹಜ. ಆದರೆ ಎಲ್ಲ ಜನರು 22ರಂದು ಅಯೋಧ್ಯೆಗೆ ಬರುವುದು ಬೇಡ. ಎಲ್ಲರೂ ಬಂದರೆ ಕಷ್ಟವಾಗಬಹುದು. ಹಾಗಾಗಿ ೧೪೦ ಕೋಟಿ ದೇಶವಾಸಿಗಳು ಅಂದು ತಮ್ಮ ಮನೆಯಲ್ಲಿ ರಾಮಜ್ಯೋತಿ ಬೆಳಗಬೇಕು ಮತ್ತು ದೀಪಾವಳಿಯಂತೆ ಸಂಭ್ರಮಿಸಬೇಕು. ಜ. 23ರಿಂದ ಎಲ್ಲರೂ ರಾಮನ ದರ್ಶನ ಪಡೆಯಬಹುದು ಎಂದರು.