`ಪ್ರಜಾಧ್ವನಿ’ ಯಾತ್ರೆ ಮುಂದಕ್ಕೆ

ಪ್ರಜಾಧ್ವನಿ
Advertisement

ಬೆಳಗಾವಿ(ಚಿಕ್ಕೋಡಿ): ಚಿಕ್ಕೋಡಿ ಭಾಗದ ಸಪ್ತ ಕ್ಷೇತ್ರಗಳಲ್ಲಿ ಮಾ. 3 ಮತ್ತು 4ರಂದು ನಡೆಯಬೇಕಾಗಿದ್ದ ಮೂರನೇ ಹಂತದ ಕಾಂಗ್ರೆಸ್‌ನ ಪ್ರಜಾಧ್ವನಿ ಯಾತ್ರೆ ದಿಢೀರ್ ಮುಂದಕ್ಕೆ ಹೋಗಿದೆ.
ಈ ಭಾಗದ ಕೆಲವು ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಿರುವುದೇ ಯಾತ್ರೆ ಮುಂದೂಡಲು ಕಾರಣ ಎನ್ನಲಾಗಿದೆ. ಆದರೆ ಹುಕ್ಕೇರಿಯಲ್ಲಿ ಮಾತ್ರ ಮಾ. 2ರಂದು ಯಾತ್ರೆ ನಡೆಯಲಿದೆ.
ಈ 7 ಕ್ಷೇತ್ರಗಳ ಪೈಕಿ ಕೆಲವೆಡೆ ಕಾಂಗ್ರೆಸ್ ಟಿಕೆಟ್‌ಗೆ ತೀವ್ರ ಪೈಪೋಟಿ ಇದೆ. ಪ್ರಮುಖ ಆಕಾಂಕ್ಷಿಗಳಲ್ಲದೆ ಎರಡಂಕಿ ದಾಟುವಷ್ಟು ಆಕಾಂಕ್ಷಿಗಳು ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಇಲ್ಲಿನ ಆಕಾಂಕ್ಷಿಗಳ ಮನವೊಲಿಸಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ನಡೆಸಲಿದೆ ಎಂದು ಹೇಳಲಾಗುತ್ತಿದೆ.
ಜಿಲ್ಲೆಯ ಕೆಲವು ಕಡೆ ಒಬ್ಬರು, ಇಬ್ಬರು ಅಲ್ಲದೆ ಅದಕ್ಕೂ ಹೆಚ್ಚಿರುವ ಆಕಾಂಕ್ಷಿಗಳನ್ನು ಕರೆದು ಮನವೊಲಿಸುವ ಕೆಲಸ
ನಡೆದಿದೆ. ಹೀಗಾಗಿ ಚಿಕ್ಕೋಡಿ ಭಾಗದಲ್ಲೂ ಆಕಾಂಕ್ಷಿಗಳ ಮನವೊಲಿಸಿ ಟಿಕೆಟ್ ಅಂತಿಮಗೊಳಿಸಿಯೇ ಯಾತ್ರೆ ನಡೆಸಲಾಗುತ್ತದೆ ಎಂದು ಹೇಳಲಾಗಿದೆ.