ಪೊಲೀಸ ವೈಫಲ್ಯ- ಅಧಿವೇಶನದಲ್ಲಿ ಪ್ರಸ್ತಾಪ

Advertisement

ಬೆಳಗಾವಿ: ಬೆಳಗಾವಿ ನಗರ ಪೊಲೀಸ್ ವ್ಯವಸ್ಥೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಅಭಯ ಪಾಟೀಲರು, ಅಧಿವೇಶನದಲ್ಲಿ ಪ್ರಸ್ತಾಪ‌ ಮಾಡುವುದಾಗಿ ತಿಳಿಸಿದರು.
ಶಹಾಪುರ ಪ್ರದೇಶದಲ್ಲಿ‌ ಇ ಬೈಕ್ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದರು.

ಬೆಳಗಾವಿ ನಗರದಲ್ಲಿ ಪೊಲೀಸ್ ವ್ಯವಸ್ಥೆ ಎನ್ನುವುದೇ ಇಲ್ಲದಂತಾಗಿದೆ., ಆಯುಕ್ತರ ಕಚೇರು ಬಂದ ನಂತರ ಅಧಿಕಾರಿಗಳು ಹೆಚ್ಚಾದರು‌ ಅಪರಾಧ ಸಂಖ್ಯೆ ಕಡಿಮೆ‌‌ ಆಗಿಲ್ಲ.

ಕಳೆದ ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿ ಬೀಡು ಬಿಟ್ಟವರನ್ನು ಎತ್ತಂಗಡಿ ಮಾಡುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಅಧಿವೇಶನ ಸಂದರ್ಭದಲ್ಲಿ ಪ್ರಸ್ತಾಪ ಮಾಡಲಾಗುವುದು.‌ಅಷ್ಟೇ ಅಲ್ಲ ಹಿರಿಯ ಅಧಿಕಾರಿಗಳ ಜೊತೆ ಸಭೆ ಕೂಡ ಮಾಡಲಾಗುವುದು ಎಂದು ಶಾಸಕರು ಹೇಳಿದರು.

ತಪ್ಪು ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವುದೇ ಅಪರೂಪ ಆಗಿದೆ. ಹೀಗಾಗಿ ವ್ಯವಸ್ಥೆ ಯನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಶಾಸಕನಾಗಿ ಕೆಲಸ ಮಾಡುವುದಾಗಿ ತಿಳಿಸಿದರು.

ಬೆಳಗಾವಿ ನಗರದಲ್ಲಿ ಕೆಲ ಪೊಲೀಸ ಅಧಿಕಾರಿಗಳ ಲಂಚಬಾಕತನದ ಆಡಿಯೋ ಬಹಿರಂಗವಾಗಿದ್ದರ ಬಗ್ಗೆಯೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದರು.