ಬೆಂಗಳೂರು: ನಾನು ಪೆನ್ ಡ್ರೈವ್ ಇದೆ ಎಂದು ಹೆದರಿಸಲ್ಲ, ಚುನಾವಣೆಯನ್ನ ಎದುರಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಹೇಳಿದ್ದಾರೆ.
ಪೆನ್ ಡ್ರೈವ್ ಹಿಂದೆ ಮಹಾನಾಯಕ ಕೈವಾಡ ಇದೆ ಎಂಬ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್.ಡಿ ಕುಮಾರಸ್ವಾಮಿ ಅವರು ನನ್ನನ್ನು ನೆನಪಿಸಿಕೊಂಡಿಲ್ಲ ಅಂದ್ರೆ ನಿದ್ದೆ ಬರಲ್ಲ. ನಾನು ಇಂತಹ ಚಿಲ್ಲರೆ ಕೆಲಸ ಮಾಡಲ್ಲ. ನಾನು ಪೆನ್ ಡ್ರೈವ್ ಇದೆ ಎಂದು ಹೆದರಿಸಲ್ಲ. ಚುನಾವಣೆಯನ್ನ ಎದುರಿಸುತ್ತೇವೆ ನೇರವಾಗಿ ಅಸಂಬ್ಲಿಯಲ್ಲಿ ಚರ್ಚೆ ಮಾಡುತ್ತೇವೆ. ಇನ್ನು ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅಮಾನತು ಕುರಿತಂತೆ ಮಾತನಾಡಿ ಪಕ್ಷದಿಂದ ವಜಾ ಮಾಡಲಿ, ಒಳಗೆ ಇಟ್ಟುಕೊಳ್ಳಲಿ. ಅದೆಲ್ಲ ಕಣ್ಣು ಒರೆಸುವ ನಾಟಕ. ಈ ಅಮಾನತಿನ ಬಗ್ಗೆ ರಾಜಕಾರಣದಲ್ಲಿ ನನಗೂ ಗೊತ್ತಿದೆ. ನನ್ನ ವಿರುದ್ಧ ಮೊದಲು ಪ್ರತಿಭಟನೆ ಮಾಡಲಿ. ಕುಮಾರಸ್ವಾಮಿ ಯಾವ ಕರೆ ಕೊಡುತ್ತೀಯೋ ಕೊಡು. ಕರೆ ಕೊಡಬೇಕು ನೀನು. ನೀನು ಕೊಡಲಿ ಅಂತನೇ ಹೇಳುತ್ತಿದ್ದೇನೆ ಎಂದು ಆಗ್ರಹಿಸಿದರು.