ಪೆಗಾಸಸ್ ಅವರ ಮನಸ್ಸು, ಬುದ್ದಿಯಲ್ಲಿದೆ: ಅನುರಾಗ್ ಠಾಕೂರ್

ಅನುರಾಗ
Advertisement

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ‘ಪೆಗಾಸಸ್’ ವಿಷಯದ ಕುರಿತು ನೀಡಿದ ಹೇಳಿಕೆಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಶುಕ್ರವಾರ ತೀವ್ರವಾಗಿ ಕಿಡಿ ಕಾರಿದ್ದಾರೆ. ಆಧಾರರಹಿತ ಆರೋಪಗಳನ್ನು ಮಾಡುವುದು ಮತ್ತು ವಿದೇಶಗಳಲ್ಲಿ ಭಾರತಕ್ಕೆ ‘ಮಾನಹಾನಿ’ ಮಾಡುವ ಗುಣವನ್ನು ಬೆಳೆಸಿಕೊಂಡಿದ್ದಾರೆ. ಪೆಗಾಸಸ್ ಅವರ ಮನಸ್ಸಿನಲ್ಲಿದೆ ಎಂದಿದ್ದಾರೆ. ಪ್ರಧಾನಿ ಮೋದಿ ಬಗ್ಗೆ ಇಟಲಿ ಪ್ರಧಾನಿ ಹೇಳಿದ್ದನ್ನ ರಾಹುಲ್ ಗಾಂಧಿ ಕೇಳಬೇಕು
ಮೂರು ರಾಜ್ಯಗಳ ಚುನಾವಣ ಫಲಿತಾಂಶವು ಕಾಂಗ್ರೆಸನ್ನು ಮತ್ತೊಮ್ಮೆ ಅಳಿಸಿಹಾಕಿದೆ ಎಂಬುದನ್ನು ತೋರಿಸುತ್ತದೆ. ಕಾಂಗ್ರೆಸ್ ಜನಾದೇಶವನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಮತ್ತು ನಿನ್ನೆಯ ಫಲಿತಾಂಶವು ಜನರು ಪ್ರಧಾನಿ ಮೋದಿಯನ್ನು ನಂಬುತ್ತಾರೆ ಎಂಬುದನ್ನು ತೋರಿಸುತ್ತದೆ ಕಳೆದ 70 ವರ್ಷಗಳಲ್ಲಿ ಸಾಧ್ಯವಾಗದ ಸಾಧನೆಯನ್ನು ,ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಕಳೆದ ಏಳು ವರ್ಷಗಳಲ್ಲಿ ಮಾಡಿದೆ ಎಂದರು.
ಕೋವಿಡ್‌ ಸಮಯದಲ್ಲಿ ಭಾರತ ಕೈಗೊಂಡ ಕ್ರಮಗಳು ಆರ್ಥಿಕ ವ್ಯವಸ್ಥೆಯನ್ನು ಸದೃಢವಾಗಿಸಿದೆ. ಇಡೀ ವಿಶ್ವ, ಕೋವಿಡ್‌ ಸಮಯದಲ್ಲಿ ಕಂಗೆಟ್ಟು ಹೋಗಿದ್ದ ಸಂದರ್ಭದಲ್ಲಿಯೂ ಭಾರತ ಅನೇಕ ಯೋಜನೆಗಳನ್ನು ರೂಪಿಸಿತು. ಯಾರೊಬ್ಬರೂ ಹಸಿವಿನಿಂದ ಬಳಲಬಾರದು ಎನ್ನುವ ಉದ್ದೇಶದಿಂದ, ಕೋಟ್ಯಂತರ ಜನರಿಗೆ ಉಚಿತವಾಗಿ ಪಡಿತರ ನೀಡುವ ವ್ಯವಸ್ಥೆ ಮಾಡಿದೆ ಎಂದರು. ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದ ವಿದ್ಯಾರ್ಥಿಗಳ ರಕ್ಷಣೆಗೆ ನಿಂತಿದ್ದ ಕೇಂದ್ರ ಸರ್ಕಾರ, ಆಪರೇಷನ್ ಗಂಗಾ ಮೂಲಕ, ಅವರನ್ನು ಸುರಕ್ಷಿತವಾಗಿ ಕರೆತರುವ ವ್ಯವಸ್ಥೆ ಮಾಡಿತ್ತು. ಇದು ಕೇಂದ್ರ ಸರ್ಕಾರದ ಅತ್ಯಂತ ದೊಡ್ಡ ಕಾರ್ಯಾಚರಣೆ ಎಂದರು. ಇವುಗಳ ಪರಿಣಾಮವಾಗಿಯೇ ನಿನ್ನೆ ನಡೆದ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಸಾಧಿಸಲು ಕಾರಣವಾಗಿದೆ ಎಂದರು.