ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾದಿಮೀರ್ ಪುಟಿನ್ ಮತ್ತೊಮ್ಮೆ ಹತ್ಯಾ ಯತ್ನದಲ್ಲಿ ಪಾರಾಗಿದ್ದಾರೆ ಎಂದು ವಿದೇಶಿ ಪತ್ರಿಕೆ ಪ್ರಕಟಿಸಿದೆ. ಆದರೆ ಈ ಹತ್ಯಾಯತ್ನ ಯಾವಾಗ ನಡೆದಿದೆ ಎಂಬುದು ತಿಳಿದಿಲ್ಲ. ಈಗಾಗಲೇ ಅವರು ಐದು ಹತ್ಯಾಯತ್ನಗಳಿಂದ ಪಾರಾಗಿದ್ದಾರೆ. ಪುಟಿನ್ ತಮ್ಮ ಲಿಮೊಸಿನ್ ಕಾರಿನಲ್ಲಿ ಅಧಿಕೃತ ನಿವಾಸಕ್ಕೆ ತೆರಳುವಾಗ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಈ ಸಂಬಂಧ ಹಲವಾರು ಮಂದಿಯನ್ನು ಬಂಧಿಸಲಾಗಿದೆ ಈ ನಡುವೆ ಉಕ್ರೇನ್ ಅಧ್ಯಕ್ಷ ವೊಲೊಡ್ಮಿರ್ ಝೆಲೆನ್ಸ್ಕಿ ಕಾರು ಕೂಡಾ ಅಪಘಾತಕ್ಕೀಡಾಗಿದೆ. ಆದರೆ ಯಾವುದೇ ರೀತಿಯ ಗಾಯಗೊಳ್ಳದೇ ಝೆಲೆನ್ಸ್ಕಿ ಪಾರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.