ಪಿಎಫ್ಐ ಭಾಗ್ಯ ಪೋಸ್ಟರ್ ಬಿಡುಗಡೆ

ಪಿಎಫ್ಐ ಭಾಗ್ಯ
Advertisement

ಪಿಎಫ್ಐ ಭಾಗ್ಯ ಪೋಸ್ಟರ್ ಬಿಡುಗಡೆ ಮಾಡಿ ಕಂದಾಯ ಸಚಿವ ಆರ್ ಅಶೋಕ್ ಸಿದ್ದರಾಮಯ್ಯ ಅವರನ್ನು ಲೇವಡಿ ಮಾಡಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಪೋಸ್ಟರ್‌ ಬಿಡುಗಡೆಗೊಳಿಸಿ ಮಾತನಾಡಿದ ಅವರು, ನಾನು ಹೇಳಿದ ಬಳಿಕ ಬ್ಯಾನ್ ಮಾಡಿದ್ದಾರೆ ಎಂದು ಹೇಳುವ ಸಿದ್ದರಾಮಯ್ಯ ಇದೇ ಪಿಎಫ್ಐ, ಕೆಡಿಎಫ್‌ನ 1,600 ಜನ ವಿಧ್ವಂಸಕ ಕೃತ್ಯ ಎಸಗಿದವರ ಮೇಲಿನ ಪ್ರಕರಣ ವಾಪಸ್ ಪಡೆಯುವ ಕೆಲಸ ಮಾಡ್ತಾರೆ. ಈಗ ಹೇಳಿ, ದೇಶದ್ರೋಹಿಗಳಿಗೆ ಬೆಂಬಲ ಕೊಟ್ಟಿಲ್ವಾ ಎಂದು ಅಶೋಕ್‌ ಪ್ರಶ್ನಿಸಿದ್ದಾರೆ.