ಲಾಹೋರ್: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿ, ಪಿಎಂಎಲ್-ಎನ್ ನಾಯಕಿ ಮರ್ಯಮ್ ನವಾಜ್ ಪಾಕಿಸ್ತಾನ ಪಂಜಾಬ್ ಪ್ರಾಂತ್ಯದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
12 ಕೋಟಿ ಜನ ನೆಲೆಸಿರುವ ಪಂಜಾಬ್ ಪ್ರಾಂತ್ಯದಲ್ಲಿ ನಡೆದ ಚುನಾವಣೆಯಲ್ಲಿ ಇಮ್ರಾನ್ ಖಾನ್ ಅವರ ಪಿಟಿಐ ಬೆಂಬಲಿತ ಪಕ್ಷದ ಸುನ್ನಿ ಇತ್ತೆಹಾದ್ ಕೌನ್ಸಿಲ್ (SIC)ನ ನಾಯಕ ರಾಣಾ ಅಫ್ತಾಬ್ ವಿರುದ್ಧ ಮರ್ಯಮ್ ಜಯಗಳಿಸಿದ್ದಾರೆ. ಎಸ್‌ಐಸಿ ಸದಸ್ಯರ ಬಹಿಷ್ಕಾರದಿಂದಾಗಿ ರಾಣಾ ಅಫ್ತಾಬ್ ಅಹ್ಮದ್ ಶೂನ್ಯ ಮತಗಳನ್ನು ಪಡೆದು ಸೋಲನುಭವಿಸಿದ್ದಾರೆ.