ಚಿಕ್ಕಮಗಳೂರು: ರಾಜ್ಯದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದ ಯುವಕನನ್ನು ಕೊಪ್ಪ ಪೊಲೀಸ್ ಠಾಣೆ ಪೋಲಿಸರು ಶುಕ್ರವಾರ ಬಂಧಿಸಿದ್ದಾರೆ.
ಫೇಸ್‌ಬುಕ್‌ನಲ್ಲಿ ಅಸ್ಗರ್ ಎನ್ನುವ ವ್ಯಕ್ತಿ ಪಾಕ್ ಪರ ಘೋಷಣೆ ಕೂಡಿದ್ದ ಪೋಸ್ಟ್ ಹಾಕಿದ್ದ, ಈ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ಅಸ್ಗರ್ ಎನ್ನುವ ಯುವಕನ್ನು ವಶಕ್ಕೆ ತೆಗೆದುಕೊಂಡಿದ್ದು, ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ ಅಂಥ ತಿಳಿದು ಬಂದಿದೆ.