ಮುಂಬೈ: ರಿಲಯನ್ಸ್ ರಿಟೇಲ್‌ನ ಅಧಿಕ ಕಾರ್ಯಕ್ಷಮತೆಯ ಮತ್ತು ತಾಂತ್ರಿಕವಾಗಿ ಸುಧಾರಿತ ಕ್ರೀಡಾ ಉಡುಪು ಬ್ರ‍್ಯಾಂಡ್ ಪರ್ಫಾರ್ಮ್ಯಾಕ್ಸ್‌ಗೆ
ಭಾರತದ ಪ್ರಮುಖ ಬೌಲರ್ ಜಸ್‌ಪ್ರೀತ್ ಬುಮ್ರಾ ಬ್ರ‍್ಯಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ.
ಜಸ್‌ಪ್ರೀತ್ ಬುಮ್ರಾ ನಮ್ಮ ಸಂಸ್ಥೆಯ ಬ್ರ‍್ಯಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದು ಸಂತಸದ ಸಂಗತಿ ಎಂದು ರಿಲಯನ್ಸ್ ರಿಟೇಲ್‌ನ ಫ್ಯಾಷನ್ ಮತ್ತು ಲೈಫ್‌ಸ್ಟೈಲ್‌ನ ಸಿಇಒ ಅಖಿಲೇಶ್ ಹೇಳಿದರು. ನನಗೆ ನೀಡಿರುವ ಜವಾಬ್ದಾರಿಯನ್ನು ಯಶಸ್ಸಿಯಾಗಿ ನಿರ್ವಹಿಸುವ ಮೂಲಕ ಸಂಸ್ಥೆಯ ಪ್ರಗತಿಗೆ ಶ್ರಮಿಸುವೆ ಎಂದು ಜಸ್‌ಪ್ರೀತ್ ಬುಮ್ರಾ ಭರವಸೆ ನೀಡಿದ್ದಾರೆ.