ಹುಬ್ಬಳ್ಳಿ : ಕಲಘಟಗಿಯಲ್ಲಿ ಬುಧವಾರ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಕಾರ್ಯಕ್ರಮದ ವರದಿಗೆ ತೆರಳಿದ್ದ ವೇಳೆ ಅಲ್ಲಿ ಇನ್ ಸ್ಪೆಕ್ಟರ್ ಎಸ್.ಎಸ್ ಕೌಜಲಗಿ ಖಾಸಗಿ ಸುದ್ದಿ ವಾಹಿನಿ ವರದಿಗಾರ ಶಿವು ಪತ್ತಾರ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದನ್ನು ಖಂಡಿಸಿ ವರದಿಗೆ ತೆರಳಿದ್ದ ಪರ್ತಕರ್ತರು ಪ್ರತಿಭಟನೆ ನಡೆಸಿದರು.
ಇನ್‌ಸ್ಪೆಕ್ಟರ್ ಕೌಜಲಗಿ ಪತ್ರಕರ್ತನ ಮೇಲೆ ದರ್ಪ ಮೆರೆದಿದ್ದಾರೆ. ಅವರು ಕ್ಷಮೆ ಕೇಳಬೇಕು ಹಾಗೂ ತಕ್ಷಣ ಅವರ ವಿರುದ್ಧ ಮೇಲಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಪಟ್ಟು ಹಿಡಿದು ಪ್ರತಿಭಟಿಸಿದರು. ಪರಿಸ್ಥಿರಿ ಗಂಭೀರತೆ ಅರಿತ ಇತರ ಪೊಲೀಸ್ ಅಧಿಕಾರಿಗಳು ಪ್ರತಿಭಟನಾ ನಿರತ ಪರ್ತಕರ್ತರ ಮನವೊಲಿಸುವ ಪ್ರಯತ್ನ ಮಾಡಿದರು. ಇದಕ್ಕೆ ಪತ್ರಕರ್ತರು ಒಪ್ಪಲಿಲ್ಲ.
ಕೊನೆಗೆ ಇನ್ ಸ್ಪೆಕ್ಟರ್ ಕೌಜಲಗಿ ತಮ್ಮಿಂದಾದ ಪ್ರಮಾದಕ್ಕೆ ಕ್ಷಮೆ ಕೋರಿದರು. ಪರ್ತಕರ್ತರು ಎಂಬುದು ಗೊತ್ತಿರಲಿಲ್ಲ. ಭದ್ರತೆ ವೇಳೆ ಪ್ರಮಾದ ಆಗಿದೆ ಎಂದು ಸಮಜಾಯಿಸಿ ನೀಡಿದರು. ಬಳಿಕ ಪರ್ತಕರ್ತರು ಪ್ರತಿಭಟನೆ ಹಿಂದಕ್ಕೆ ಪಡೆದರು.
ಆದರೆ, ಇನ್ ಸ್ಪೆಕ್ಟರ್ ವಿರುದ್ಧ ಕ್ರಮ ಜರುಗಿಸಲೇಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಲಾಗುವುದು ಪ್ರತಿಭಟನಾ ನಿರತ ಪರ್ತಕರ್ತರು ಹೇಳಿದರು. ಪತ್ರಕರ್ತನೊಂದಿಗೆ ಇನ್ ಸ್ಪೆಕ್ಟರ್ ನಡೆದುಕೊಂಡ ರೀತಿಯನ್ನು ಕಾರ್ಯನಿರತ ಪರ್ತಕರ್ತರ ಸಂಘ ಖಂಡಿಸಿದೆ.