ಪಂಚರತ್ನ ರಥಯಾತ್ರೆ ಜನಪರ ಕಾಳಜಿ ಇರುವ ಯಾತ್ರೆ: ಕುಮಾರ ಸ್ವಾಮಿ

ಪಂಚರತ್ನ
Advertisement

ಕೋಲಾರ: ಕಾಂಗ್ರೆಸ್ ಅಧಿಕಾರ ತಪ್ಪಿಸಲು ಪಂಚರತ್ನ ರಥಯಾತ್ರೆ ನಡೆಸಲಾಗುತ್ತಿದೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಎಚ್.ಡಿ.ಕೆ ವ್ಯಂಗ್ಯವಾಗಿ ಮಾತನಾಡಿ ನಾವು ಅಧಿಕಾರಕ್ಕೆ ಬರದೆ, ಮತ್ತೆ ರಮೇಶ್ ಜಾರಕಿಹೊಳಿ ಅಧಿಕಾರಕ್ಕೆ ಬರಬೇಕಾ ? ಇನ್ನೊಂದು ವಿಡಿಯೊ ಮಾಡೊಕೆ ಅವರು ಅಧಿಕಾರಕ್ಕೆ ಬರಬೇಕಾ ? ಪಂಚರತ್ನ ರಥಯಾತ್ರೆ ಜನಪರ ಕಾಳಜಿ ಇರುವ ಯಾತ್ರೆ, ಯಾರೊ ಕಳ್ಳಕಾಕರಿಗೆ ಸಹಾಯ ಮಾಡಲು ಮಾಡತ್ತಿರುವ ಯಾತ್ರೆ ಅಲ್ಲ ಎಂದು ಕೋಲಾರದ ನಾಯಕರಹಳ್ಳಿ ಬಳಿ ಕುಮಾರಸ್ವಾಮಿ ಹೇಳಿದರು. ಬಿಜೆಪಿ ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಂಡಿದೆ ರಾಜ್ಯದಲ್ಲಿ ಓಟರ್ ಲಿಸ್ಟ್ ಗೋಲ್ ಮಾಲ್ ಪ್ರಕರಣಕ್ಕೆ ಸಂಬದಿಸಿದಂತೆ ಜೆಡಿಎಸ್ ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಿದೆ ಎಂದರು.