ನೌಕಪಡೆಯ ಲೆಫ್ಟಿನೆಂಟ್ ಆಗಿ ಬಿಜೆಪಿ ಮುಖಂಡನ ಪುತ್ರ ಆಯ್ಕೆ

Advertisement

ಮಂಡ್ಯ: ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಬಿಜೆಪಿ ಮುಖಂಡರೊಬ್ಬರ ಮಗ ನೌಕಪಡೆಯ ಲೆಫ್ಟಿನೆಂಟ್ ಆಗಿ ಆಯ್ಕೆಯಾಗಿದ್ದಾರೆ.
ಈ ಕುರಿತಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ನಮ್ಮ ಪಕ್ಷದ ಪ್ರಮುಖರೂ ಆದ ಶ್ರೀ ಬಿ.ಸಿ.ಮಂಜು ಅವರು ತಮ್ಮ ಏಕೈಕ ಸುಪುತ್ರ ಬಿ.ಎಂ.ಸಾಗರ್ ಅವರ ಅಭಿಲಾಷೆಯಂತೆ ಭಾರತೀಯ ಸೇನಾ ನೌಕಾ ಪಡೆಯ ಲೆಫ್ಟಿನೆಂಟ್ ಆಗಿ ಸೇರ್ಪಡೆಗೊಳ್ಳಲು ಸಮರ್ಪಣಾ ಭಾವ ಪ್ರದರ್ಶಿಸಿರುವುದು ಪ್ರಶಂಸನೀಯ ಕಾರ್ಯವಾಗಿದೆ.

ಬಿ.ಎಂ ಸಾಗರ್ ಪ್ರಸ್ತುತ ನೌಕಾಪಡೆಯ ಲೆಫ್ಟಿನೆಂಟ್ ಆಗಿ ಆಯ್ಕೆಯಾಗಿದ್ದು ನಾಡಿನ ಹೆಮ್ಮೆಯಾಗಿದೆ. ರಾಷ್ಟ್ರ ರಕ್ಷಣೆಗಾಗಿ ದೇಶಪ್ರೇಮ ಮೆರೆದಿರುವ ಅವರನ್ನು ಅಭಿಮಾನ ಪೂರ್ವಕವಾಗಿ ಅಭಿನಂದಿಸುವೆ ಎಂದಿದ್ದಾರೆ.