ಹುಬ್ಬಳ್ಳಿ : ಗುರುವಾರ ಹತ್ಯೆಯಾದ ನೇಹಾ ಹಿರೇಮಠ ಪಾರ್ಥೀವ ಶರೀರ ದರ್ಶನಕ್ಕೆ ಕಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಆಗಮಿಸಿದ ಫಕೀರ ದಿಂಗಾಲೇಶ್ವರಶ್ರೀಗಳು ಬಿಕ್ಕಿ ಬಿಕ್ಕಿ ಅತ್ತರು.
ನೇಹಾ ಪ್ರತಿಭಾನ್ವಿತೆಯಾಗಿದ್ದಳು. ಪ್ರತಿ ಅಮವಾಸ್ಯೆ ದಿನ ಪೋಷಕರೊಂದಿಗೆ ನಮ್ಮ ದರ್ಶನ, ಆಶೀರ್ವಾದ ಪಡೆಯುತ್ತಿದ್ದಳು. ಆಕೆಯ ಪ್ರತಿಭೆ ಕಂಡು ನೀನು ಐಎಎಸ್ ಮಾಡು ಎಂದು ಹೇಳಿದ್ದೆ ಎಂದರು.
ನೇಹಾ ಹತ್ಯೆ ಆಘಾತಕಾರಿಯಾದುದು. ಇಂತಹ ಕೃತ್ಯಗಳು ನಡೆಯಬಾರದು. ಆರೋಪಿಗೆ ತಕ್ಷಣ ಶಿಕ್ಷೆಯಾಗಬೇಕು. ವಿಳಂಬ ಆಗಬಾರದು ಎಂದು ಒತ್ತಾಯಿಸುವ ವೇಳೆ ದುಃಖ ಉಮ್ಮಳಿಸಿ ಬಂದಿತು.
ಕಣ್ಣೀರು ಹಾಕುತ್ತಲೇ ಮಾತನಾಡಿದ ಶ್ರೀಗಳು, ಸರ್ಕಾರ ತಕ್ಷಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.