ಭುವನೇಶ್ವರ್: ಹಾಲಿ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ನೀರಜ್ ಚೋಪ್ರಾ ಇಲ್ಲಿ ನಡೆದ ಫೆಡರೇಶನ್ ಕಪ್ ೨೦೨೪ ರ ಪುರುಷರ ಜಾವೆಲಿನ್ ಸ್ಪರ್ಧೆಯಲ್ಲಿ ಬಂಗಾರದ ಸಾಧನೆ ಮಾಡಿ ಹಿರಿಮೆ ಮೆರೆದಿದ್ದಾರೆ.
ಬುಧವಾರ ನಡೆದ ಸ್ಪರ್ಧೆಯಲ್ಲಿ ತಮಗೆ ತೀವ್ರ ಪೈಪೋಟಿ ನೀಡಿದ ಡಿಪಿ ಮನು ಅವರನ್ನು ಹಿಂದಿಕ್ಕಿ ಚಿನ್ನದ ಪದಕ ಬಾಚಿಕೊಂಡರು.
ಸ್ಟಾರ್ ಜಾವೆಲಿನ್ ಥ್ರೋವರ್ ತಮ್ಮ ನಾಲ್ಕನೇ ಪ್ರಯತ್ನದಲ್ಲಿ ೮೨.೨೭ ಮೀಟರ್‌ಗಳ ಅತ್ಯುತ್ತಮ ಎಸೆತವನ್ನು ದಾಖಲಿಸಿ ಅಗ್ರ ಗೌರವವನ್ನು ಪಡೆದರು. ಮೂರನೇ ಸುತ್ತಿನವರೆಗೂ ೮೨.೦೬ ಮೀಟರ್ ಎಸೆದು ಪೋಲ್ ಸ್ಥಾನದಲ್ಲಿದ್ದ ಡಿಪಿ ಮನು ನಂತರದ ಸ್ಪರ್ಧೆಯಲ್ಲಿ ನೀರಜ್ ಅವರನ್ನು ಹಿಂದಿಕ್ಕಲು ವಿಫಲರಾದರು.
.ಭುವನೇಶ್ವರದ ಕಳಿಂಗ ಸ್ಟೇಡಿಯಂನಲ್ಲಿ ಮೂರು ವರ್ಷಗಳ ನಂತರ ಫೆಡರೇಶನ್ ಕಪ್‌ನಲ್ಲಿ ಪಾಲ್ಗೊಂಡಿದ್ದರು. ಫೆಡರೇಶನ್ ಕಪ್ ೨೦೨೧ ರ ಪುರುಷರ ಜಾವೆಲಿನ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ನೀರಜ್, ೮೭.೮೦ ಮೀಟರ್ ದೂರ ಎಸೆತ ದಾಖಲೆಯೊಂದಿಗೆ ಚಿನ್ನದ ಪದಕ ಪಡೆದಿದ್ದರು.