ನೀನ್ಯಾವ ಸೀಮೆ ಎಂಎಲ್‌ಸಿ – ದಂಗಾದ ರವಿಕುಮಾರ್

Advertisement

ಕೋಲಾರ: ಎಂಎಲ್‌ಸಿ ರವಿಕುಮಾರ್‌ ಅವರ ಕಾರು, ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಗಾಯಗೊಂಡ ಘಟನೆ ಇಂದು ಕೋಲಾರದ ಲಕ್ಷ್ಮೀ ಸಾಗರ ಗೇಟ್‌ ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ನಡೆದಿದೆ.
ಹೊಸಕೋಟೆ ತಾಲೂಕಿನ ಶಿವನಾಪುರ ಗ್ರಾಮದ ಗೋಪಾಲ್(೪೫) ಎಂಬಾತನೇ ಗಾಯಗೊಂಡ ವ್ಯಕ್ತಿ. ಈ ಮಧ್ಯೆ, ಬೈಕ್‌ಗೆ ಹಿಂಬಂದಿಯಿಂದ ತಮ್ಮ ಕಾರು ಡಿಕ್ಕಿಯಾದರೂ ಆಸ್ಪತ್ರೆಗೆ ಸೇರಿಸಲು ಹಿಂದೇಟು ಹಾಕಿದ ಎಂಎಲ್‌ಸಿ ವಿರುದ್ಧ ಸ್ಥಳೀಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ನೀನ್ಯಾವ ಸೀಮೆ ಎಂಎಲ್‌ಸಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದರಿಂದ ರವಿಕುಮಾರ್‌ ದಂಗಾಗಿದ್ದಾರೆ.
ಸ್ಥಳಕ್ಕೆ ವೇಮಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಸ್ಥಳೀಯರನ್ನು ಸಮಾಧಾನ ಪಡಿಸಿದ್ದಾರೆ.