ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನ ಜಾಂಬೋಟಿ ಬಳಿಯ ಬಟವಡೆ ಫಾಲ್ಸ್‌ನಲ್ಲಿ ಗುಂಡು, ತುಂಡು ಪಾರ್ಟಿ ಮಾಡಿದ ಘಟನೆ ನಡೆದಿದೆ. ಅರಣ್ಯ ವ್ಯಾಪ್ತಿಯಲ್ಲಿ ಇರೋ ಫಾಲ್ಸ್‌ಗೆ ಅಕ್ರಮ ಪ್ರವೇಶ ಮಾಡಿದ್ದಲ್ಲದೆ ಫಾಲ್ಸ್ ಮುಂಭಾಗದಲ್ಲಿ ಗ್ಯಾಸ್ ಬಳಸಿ ಅಡುಗೆ ಮಾಡಿ ಎಣ್ಣೆ ಪಾರ್ಟಿ ಮಾಡಿ ಅರಣ್ಯ ಪ್ರದೇಶದಲ್ಲಿ ಹುಚ್ಚಾಟ ಮಾಡಿದ್ದಾರೆ ಹೆಸ್ಕಾಂ ಸಿಬ್ಬಂದಿ, ಖಾಸಗಿ, ಸರ್ಕಾರಿ ಆಸ್ಪತ್ರೆ ವೈದ್ಯರು ತಂಡ ಇತ್ತು ಎನ್ನಲಾಗಿದೆ, ಫಾಲ್ಸ್‌ಗೆ ಹೆಸ್ಕಾಂ ವಾಹನದಲ್ಲಿ ಬಂದು ಗುಂಡು, ತುಂಡು ಪಾರ್ಟಿ ಮಾಡಿದ್ದಾರೆ. ಆದರೆ ಅರಣ್ಯ ಪ್ರದೇಶ ಫಾಲ್ಸ್‌ಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಿ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಪಾಟೀಲ್ ಆದೇಶ ಮಾಡಿದ್ದರು. ಜುಲೈ 26ರಂದು ಆದೇಶ ಹೊರಡಿಸಿದ್ದ ಆದೇಶದ ನಂತರವು ಇಂತಹ ಘಟನೆ ನಡಡೆದಿದೆ. ಪೊಲೀಸ್ ಇಲಾಖೆಯಿಂದ ಜಾಂಬೋಟಿ ಬಳಿ ಚೆಕ್ ಪೋಸ್ಟ್ ನಿರ್ಮಾಣ ಮಾಡಿದ್ದು ಪೊಲೀಸರನ್ನ ಯಾಮಾರಿಸಿ ಸರ್ಕಾರಿ ವಾಹನ ಬಳಸಿ ವೈದ್ಯರು, ಹೆಸ್ಕಾಂ ಸಿಬ್ಬಂದಿ ಗ್ಯಾಂಗ್ ನಿಷೇದಿತ ಅರಣ್ಯ ಪ್ರದೇಶಕ್ಕೆ ಹೋಗಿದ್ದಾರೆ.

ಓರ್ವ ವೈದ್ಯ ಸೇರಿ ನಾಲ್ಕು ಜನರ ವಿರುದ್ಧ ಕೇಸ್ ದಾಖಲು: ಬೆಳಗಾವಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಎಣ್ಣೆ ಪಾರ್ಟಿ ಪ್ರಕರಣ ಹಾಗೂ ನಿರ್ಬಂಧ ಪ್ರದೇಶದಲ್ಲಿ ಅಕ್ರಮ ಪ್ರವೇಶ ಹಿನ್ನೆಲೆಯಲ್ಲಿ ಓರ್ವ ವೈದ್ಯ ಸೇರಿ ನಾಲ್ಕು ಜನರ ವಿರುದ್ಧ ಕೇಸ್ ದಾಖಲಾಗಿದ್ದು, ಗ್ಯಾಸ್ ಸ್ಟೋ, ಅಡಿಗೆ ಸಾಮಗ್ರಿ ಸೀಜ್ ಮಾಡಿದ ಅರಣ್ಯಾಧಿಕಾರಿಗಳು. ಹೆಸ್ಕಾಂ ಅಧಿಕಾರಿಗಳ ರಕ್ಷಣೆ ಮಾಡಿದ ಅರಣ್ಯ ಇಲಾಖೆ ಅಧಿಕಾರಿಗಳು. ಮತ್ತು ಹೆಸ್ಕಾಂ ಇಲಾಖೆಗೆ ಸೇರಿದ್ದ ಬುಲೆರೋ ವಾಹನದಲ್ಲಿ ಬಂದಿದ್ದ ಸಿಬ್ಬಂದಿಗಳ ಮೇಲೆ ವೈಲ್ಡ್ ಲೈಫ್ ಆಕ್ಟ್ 7 ಅಡಿಯಲ್ಲಿ ಕೇಸ್ ದಾಖಲಾಗಿದೆ. ಜಾಂಬೋಟಿ ವಲಯ ಅರಣ್ಯ ಕಚೇರಿಯಲ್ಲಿ ಈ ಪ್ರಕರಣ ದಾಖಲಾಗಿದೆ.