ಬೆಂಗಳೂರು: ಪೊಲೀಸ್ ಕಮಿಷನರ್ ಅವರು ಒಂದು ಗಂಟೆಗಳ ಕಾಲ ಲೈವ್ ಚಾಟ್ ನಲ್ಲಿ ಲಭ್ಯ ಇರಲಿದ್ದು. ಸಮಸ್ತ ಬೆಂಗಳೂರು ನಾಗರಿಕರು ಲೈವ್ನಲ್ಲಿಯೇ ತಮ್ಮ ಕುಂದುಕೊರತೆಗಳನ್ನು, ದೂರುಗಳನ್ನು ಪೊಲೀಸ್ ಕಮಿಷನರ್ ಅವರೊಂದಿಗೆ ನೇರವಾಗಿ ಹಂಚಿಕೊಳ್ಳಬಹುದು. ಪೊಲೀಸ್ ಕಮಿಷನರ್ ರವರೊಂದಿಗೆ ನೇರವಾಗಿ ಸಂವಾದದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಬಳಸಿಕೊಳ್ಳಿ, ನಿಮ್ಮ ಸಮಸ್ಯೆ, ದೂರು ಅಥವಾ ಯಾವುದೇ ಅಹವಾಲುಗಳಿದ್ದರೆ ಈಗಲೇ #AMAWITHBCP ಎಂಬ ಹ್ಯಾಷ್ ಟ್ಯಾಗ್ ಬಳಸಿ ಟ್ಟೀಟ್ ಮಾಡಿ ಎಂದಿದ್ದಾರೆ.