ಹಾವೇರಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗುತ್ತಿರುವುದು ಮುಸ್ಲಿಂರಿಗೆ ಸಹಿಸಲು ಆಗುತ್ತಿಲ್ಲ. ಆದರೆ, ನಿಮ್ಮ ಆಟ ಇನ್ನು ಮುಂದೆ ನಡೆಯಲ್ಲ. ಹಿಂದೂ ಸಮಾಜ ಈಗ ಜಾಗೃತವಾಗಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದರು.
ಹಾವೇರಿದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮ ಮಂದಿರವನ್ನೇ ಸ್ಫೋಟ ಮಾಡಿ ಬಾಬರಿ ಮಸೀದಿ ನಿರ್ಮಾಣಕ್ಕೆ ಸಂಚು ರೂಪಿಸಿದ್ದರು. ಇವರ ಕನಸು ನನಸಾಗದಂತೆ ತಡೆದ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ತಿಳಿಸುತ್ತೇನೆ. ಪಾಕಿಸ್ತಾನದಲ್ಲಿದ್ದುಕೊಂಡು ಸಂಚು ರೂಪಿಸಲಾಗುತ್ತಿದೆ. ಇದಕ್ಕೆ ಕಾಂಗ್ರೆಸ್ ಕೂಡ ಸಪೋರ್ಟ್ ಮಾಡುತ್ತಿದೆ. ಆದರೆ ರಾಮಮಂದಿರದ ಒಂದು ಕಲ್ಲು ಕೂಡಾ ಅಲ್ಲಾಡಿಸೋಕೆ ಆಗಲ್ಲ ಎಂದರು.
ನೀವು ಎಷ್ಟೇ ಮಂದಿರ ಕಟ್ಟಿದರೂ ನಾವು ಅವುಗಳನ್ನು ತೆಗೆದು ಮಸೀದಿ ಕಟ್ತೀವಿ ಅಂತ ಓವೈಸಿ ಕೂಡಾ ಹೇಳಿದ್ದಾರೆ. ಈ ದೇಶದ ಅನ್ನ ತಿಂದು ನಮಕ್ ಹರಾಮಿ ಕೆಲಸ ಮಾಡ್ತಿದ್ದ ಇಂಥಹ ಸಂಘಟನೆಗಳನ್ನು ಬ್ಯಾನ್ ಮಾಡಿ ಕೇಂದ್ರ ಸರ್ಕಾರ ಒಳ್ಳೆ ಕೆಲಸ ಮಾಡಿದೆ. ಇಂಥವರನ್ನು ಗಲ್ಲಿಗೇರಿಸಬೇಕು. ಬಿಹಾರ್ನಲ್ಲಿ ಇಬ್ಬರು ಪಿಎಫ್ಐ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಅದರಲ್ಲಿ ಒಬ್ಬ ನಿವೃತ್ತ ಪೊಲೀಸ್ ಅಧಿಕಾರಿ ಇದ್ದ. ಮೋದಿಯವರ ಕಾರ್ಯಕ್ರಮದಲ್ಲಿ ಬ್ಲಾಸ್ಟ್ ಮಾಡಬೇಕು ಅಂತ ಸಂಚು ರೂಪಿಸಿದ್ದರು. ಎಲ್ಲವನ್ನೂ ಬಯಲಿಗೆಳೆದು ಪಿಎಫ್ಐನ ಮುಸ್ಲಿಂ ಮಾನಸಿಕತೆ ಬಣ್ಣ ಹೊರಹಾಕಬೇಕಿದೆ ಎಂದರು.