ನಿತ್ಯ ಪುಣೆ ಯಾನ

ಹುಬ್ಬಳ್ಳಿ
Advertisement

ಹುಬ್ಬಳ್ಳಿಯಿಂದ ಪುಣೆಗೆ ನೇರವಾಗಿ ಸಂಪರ್ಕಿಸುವ ವಿಮಾನಯಾನ ಆರಂಭವಾಗಿ ವಾರಕ್ಕೆ ಎರಡು ಬಾರಿ ವಿಮಾನ ಸೇವೆ ನೀಡುತ್ತಿದ್ದು, ಮಾರ್ಚ 13 ರಿಂದ ಪ್ರತಿ ದಿನ ಪುಣೆಗೆ ವಿಮಾನ ಸೇವೆ ಪ್ರಾರಂಭವಾಗಲಿದೆ, ಈ ಸಂತಸದ ಸುದ್ದಿಯನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ತಮ್ಮ ಸಾಮಾಜಿಕ ಜಾಲತಾನದಲ್ಲಿ ಹಂಚಿಕೊಂಡಿದ್ದು ಹುಬ್ಬಳ್ಳಿ ಧಾರವಾಡ ಅವಳಿ ನಗರ ಹಾಗೂ ಇಡೀ ಉತ್ತರ ಕರ್ನಾಟಕ ಭಾಗದ ಜನರಿಗೆ ಅನುಕೂಲವಾಗಲಿದೆ, ಜನರು ಇದರ ಲಾಭ ಪಡೆಯುವಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮನವಿ ಮಾಡಿದ್ದಾರೆ.
ಅವರು ಟ್ವೀಟ್‌ನಲ್ಲಿ ಹುಬ್ಬಳ್ಳಿಯಿಂದ ಪ್ರತಿ ದಿನ ಪುಣೆಗೆ ವಿಮಾನ ಸೇವೆ ಪ್ರಾರಂಭವಾಗಿದ್ದು, ವಾಣಿಜ್ಯ ನಗರಿಯ ವಿಮಾನಯಾನ ಸಂಪರ್ಕ ಮತ್ತಷ್ಟು ಬಲಗೊಳ್ಳಲಿದೆ. ಮಾರ್ಚ್ 13 ರಿಂದ ಪ್ರತಿ ದಿನ ಇಂಡಿಗೋ ಈ ಸೇವೆ ಪ್ರಾರಂಭಿಸಲಿದೆ.
ವಿಮಾನ ಸೇವೆಯ ವಿವರಗಳು: ಪ್ರತಿ ದಿನ 6E 7727 ಹುಬ್ಬಳ್ಳಿ – 18:30 ಪುಣೆ-19:35, ಪ್ರತಿ ದಿನ 6E 7716 ಪುಣೆ -20:00, ಹುಬ್ಬಳ್ಳಿ – 21: 05 ಹುಬ್ಬಳ್ಳಿಯಿಂದ ಪುಣೆಗೆ ಪ್ರತಿ ನಿತ್ಯ ವಿಮಾನ ಸೇವೆ ಕಲ್ಪಿಸಲು ನೆರವು ನೀಡಿದ ಕೇಂದ್ರ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಹಾಗೂ ಕೇಂದ್ರ ನಾಗರಿಕ ವಿಮಾನಯಾನ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಅನಂತ ಧನ್ಯವಾದಗಳು ಸಲ್ಲಿಸಿದ್ದಾರೆ