ಜಗತ್ತಿನಲ್ಲಿ ಯರ‍್ಯಾರೋ ಯರ‍್ಯಾರಿಗೆ ಏನೇನೋ ಅನ್ನುತ್ತಾರೆ. ಹಾಗೆ ಅಂದವರು, ಅನ್ನಿಸಿಕೊಂಡವರು ಬಹು ಬೇಗನೇ ಮರೆಯುತ್ತಾರೆ. ಹಾಗೆ ಮರೆಯಬಾರದು ಎಂದು ತಿಗಡೇಸಿ ಇದನ್ನು ಸಜ್ಜು ಮಾಡಿಕೊಂಡಿದ್ದಾನೆ. ಯಾರು ಯಾರಿಗೆ ಏನು ಅಂದರು? ಎಂದು ಜನರಿಂದಲೇ ಹೇಳಿಸಬೇಕು. ನಾಳೆ ಒಂದು ದಿನ ನಾ ಅಂದಿಲ್ಲ…ನಾ ಹಾಗಂದಿಲ್ಲ ಅಂತ ಹೇಳಬಾರದು ಎಂಬ ದೂರಾಲೋಚನೆ ತಿಗಡೇಸಿಗೆ ಇದ್ದುದರಿಂದ ಇದನ್ನು ಸಿದ್ಧಪಡಿಸಿದ್ದಾನೆ. ಇಲ್ಲಿ ಯಾರು ಏನೆಂದರು ಎಂದು ಒಂದು ಲೈನ್ ಬರೆದು ಕೆಳಗಡೆ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ. ಕರೆಕ್ಟಾಗಿರುವುದನ್ನು ಆಯ್ಕೆ ಮಾಡಿಕೊಂಡು ತುಂಬಿ ಕಳಿಸಿ..ಸರಿಯಾಗಿದ್ದರೆ ಸೂಕ್ತ ಬಹುಮಾನ ಎಂದೂ ಸಹ ಘೋಷಿಸಲಾಗಿದೆ.
೧) ಅಕ್ಕಾ ನಿಮ್ಮಕ್ಕಾ…ನೀ ನಿಮ್ಮಕ್ಕಾ ಅಲ್ಲ ನಮ್ಮಕ್ಕ….
- ಲೇವೇಗೌಡ… * ಸಿಟ್ಯೂರಪ್ಪ.. * ಗುಮ್ಮಾಯಿ ಗುಸ್ಸಣ್ಣ..* ಭಕ್ತ ಕೋರ್ಕೆಂಡೇಯ
೨) ಕರ ಮುಗಿದು ಕೇಳುವೆನು..ಗುಟಕ್ ಎಂದು ಕುಡಿಯಲು ನೀರಾದರೂ ಕೊಡಿ… - ಪಂ.ಲೇವಣ್ಣ…* ಲೇವೇಗೌಡ..* ಹಲ್ಬೀರ…* ಬಂಡೇಸ್ವರ….
೩) ಕೊಡೋದೆಲ್ಲ ಕೊಟ್ಟಿದ್ದೇವೆ ಮತ್ತೇನು ನಿಮ್ಮದು? - ನಿಮ್ಮಕ್ಕ…* ಸೋದಿಮಾಮ…*ಲಮಿತ್ ಸಾ ಕಾಕಾ * ಸಮತಾ ಅಕ್ಕಮ್ಮ..
೪) ಇದು ಯಾರು ಬರೆದ ಕಥೆಯೂ…ನನಗಾಗಿ ಬಂದ ವ್ಯಥೆಯೂ… - ವಿ.ಕೋಮಣ್ಣ…* ಮಾಣುಕಾಚಾರಿ….* ಶೆಟ್ರುಡುಗೇಸಿ…* ಕರಿಭೀಮವ್ವ
೫) ನಮಗೆ ಕುರ್ಚಿ ಬೇಡ…ಮಿರ್ಚಿ ಬೇಕು… - ಸುಮಾರಣ್ಣೋರು…ಸಿಎಂ ಇಬ್ಬಿ…* ಜಾಕಣ್ಣ…* ಸಣ್ ಹನ್ಮಂತ
೬) ಏನರ ಮಾಡ್ರಿ ಜನರಿಗೆ ಒಳ್ಳೇದು ಮಾಡ್ರಿ… - ಮುದಿಗೋವಿಂದಪ್ಪ….* ಹೋಟೆಲ್ ಶೇಷಮ್ಮ…ಮೇಕಪ್ ಮರೆಮ್ಮ* ಜಿಲಿಬಿಲಿ ಎಲ್ಲವ್ವ
೭) ನಾ ಹೇಳೋದೆಲ್ಲ ನಿಜಾನಾ..? - ಸೋದಿಮಾಮ..* ಮದ್ರಾಮಣ್ಣ…* ಲಮಿತ್ ಸಾ…* ಕನಕ ಬಂಡೇಸಿ..