ಹಾವೇರಿ: ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೂಚಕರ ಖೊಟ್ಟಿ ಸಹಿ ಮಾಡಿದ್ದ ಅಭ್ಯರ್ಥಿ ವಿರುದ್ಧ ದೂರು ದಾಖಲಾಗಿದೆ.
ಖೊಟ್ಟಿ ಸಹಿ ಮಾಡಿದ ಆರೋಪದ ಮೇಲೆ ಸಿದ್ದಪ್ಪ ಕಲ್ಲಪ್ಪ ಪೂಜಾರ ಬೊಮ್ಮನಹಳ್ಳಿ ಎಂಬುವರ ಮೇಲೆ ದೂರು ದಾಖಲಾಗಿದೆ.
ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಪಕ್ಷೇತರ ಅಭ್ಯಥಿ೯ಯಾಗಿ ನಾಮಪತ್ರ ಸಲ್ಲಿಸಲು 10 ಜನ ಸೂಚಕರ ಸಹಿ ಅಗತ್ಯ. ಸೂಚಕರು ಈ ಕ್ಷೇತ್ರದವರಾಗಿರಬೇಕು. ನಾಮಪತ್ರದಲ್ಲಿ ಸೂಚಕರ ಮತದಾರ ಪಟ್ಟಿಯ ಭಾಗಸಂಖ್ಯೆ , ಕ್ರಮಸಂಖ್ಯೆ ಕ್ರಮಬದ್ದವಾಗಿ ನಮೂದಿಸಿ ಖದ್ದಾಗಿ ಸೂಚಕರೇ ಸಹಿ ಮಾಡಿರಬೇಕು.
ಸಿದ್ದಪ್ಪ ಪೂಜಾರ ನಾಮಪತ್ರ ಸಲ್ಲಿಕೆ ವೇಳೆ ಸಂಶಯ ಬಂದ ಕಾರಣ ತಹಸೀಲ್ದಾರ್ ತನಿಖೆ ನಡೆಸಿ ಸಹಿ ನಕಲು ರುಜುವಾತಾದ ಕಾರಣ RO @ dc ದೂರು ದಾಖಲಿಸಿದ್ದಾರೆ.