ಬೆಳಗಾವಿ: ಯಾವುದೇ ಕಾರಣಕ್ಕೂ ನಾನು ಬಿಜೆಪಿ ಬಿಡಲ್ಲ. 2023ಕ್ಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರಕ್ಕೆ ಬಹುಮತ ಬರುವಂತೆ ಮಾಡಿ ಸರ್ಕಾರ ರಚಿಸಲೇಬೇಕು ಎಂಬ ಗುರಿ ಇದೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಮತ್ತೊಮ್ಮೆ ಹೇಳುತ್ತೇನೆ ಯಾವುದೇ ಕಾರಣಕ್ಕೂ ನಾನು ಬಿಜೆಪಿ ಬಿಡಲ್ಲ.ಹೆಚ್ ಡಿ ಕುಮಾರಸ್ವಾಮಿಗೆ ನಾನು ಈಗಾಗಲೇ ಹೇಳಿದ್ದೇನೆ, ಕುಮಾರಣ್ಣ ಯಾವುದೇ ಕಾರಣಕ್ಕೂ ನಾನು ಬರುವುದಿಲ್ಲ. ನಿನ್ನ ಉದ್ದೇಶ ನೀನು ಮಾಡು, ನನ್ನ ಉದ್ದೇಶ ನಾನು ಮಾಡುತ್ತೇನೆ. ನಮ್ಮ ಇಬ್ಬರ ಉದ್ದೇಶ ಒಂದೇ, ಕಾಂಗ್ರೆಸ್ ಅಧಿಕಾರಕ್ಕೆ ಬರಬಾರದು. ನಾನು ಬಿಜೆಪಿಯಲ್ಲಿ ಮಾಡ್ತೀನಿ ನೀನು ಜೆಡಿಎಸ್ನಲ್ಲಿ ಮಾಡು ಅಷ್ಟೆ ಅಂತಾ ಹೇಳಿದ್ದೇನೆ ಎಂದರು.