ನಾಡಗೌಡ, ಬೆಳಗಲಿ ಸ್ವಾಭಿಮಾನಿ ರ‍್ಯಾಲಿಯಲ್ಲಿ ಭಾರಿ ಜನಸ್ತೋಮ

Advertisement

ಬಾಗಲಕೋಟೆ: ಜಿಲ್ಲೆಯ ತೇರದಾಳ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಪಕ್ಷದಷ್ಟೇ ಪ್ರಬಲವಾಗಿ ಪಕ್ಷೇತರರು ಅಖಾಡಕ್ಕಿಳಿಯಲು ಸನ್ನದ್ಧರಾಗಿ ಸ್ವಾಭಿಮಾನದ ಕಹಳೆ ಮೊಳಗಿಸಿದ್ದಾರೆ.
ಬನಹಟ್ಟಿಯ ದೇವರ(ಜೇಡರ) ದಾಸಿಮಯ್ಯನವರ ಸಮುದಾಯ ಭವನದಿಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಾದ ಡಾ. ಪದ್ಮಜೀತ ನಾಡಗೌಡ ಪಾಟೀಲ ಹಾಗೂ ಡಾ. ಎ.ಆರ್. ಬೆಳಗಲಿಯವರಿಂದ ಸುಮಾರು 3 ಕಿಮೀನಷ್ಟು ಬೃಹತ್‌ ರ‍್ಯಾಲಿ ನಡೆಯಿತು. ಬೆಳಿಗ್ಗೆ 11ಗಂಟೆಗೆ ಪ್ರಾರಂಭವಾದ ಮೆರವಣಿಗೆಯು ಬನಹಟ್ಟಿಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಹಶೀಲ್ದಾರ್ ಕಚೇರಿವರೆಗೆ ನಡೆಯಿತು.
ಸುಮಾರು 8 ಸಾವಿರಕ್ಕೂ ಅಧಿಕ ಜನರು ಅದರಲ್ಲೂ ಮಹಿಳಾಮಣಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಸೇರಿರುವುದು ವಿಶೇಷವಾಗಿತ್ತು.