ಚಿತ್ರದುರ್ಗ: ಕರ್ನಾಟಕದ ಜನರು ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ದೂರವಿರಬೇಕು ಎಂದು ನರೇಂದ್ರ ಮೋದಿ ಹೇಳಿದ್ದಾರೆ, ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಯುಕ್ತ ಚಿತ್ರದುರ್ಗದಲ್ಲಿ ಆಯೋಜಿಸಿದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಿಂದ ಮತದಾರರು ದೂರವಿರಬೇಕು, ಇವೆರಡು ನೋಡಲು ಎರಡು ಪಕ್ಷಗಳು. ಆದರೆ ಇವರೆಡೂ ಸಿದ್ದಾಂತ, ನಡೆಯಿಂದ ಒಂದೇ ಎರಡೂ ಕುಟುಂಬ ರಾಜಕಾರಣದ ಪಕ್ಷ. ಎರಡೂ ಪಕ್ಷಗಳು ಭ್ರಷ್ಟಾಚಾರದಲ್ಲಿ ಮುಳುಗಿದೆ. ಸಮಾಜ ಒಡೆಯುವ ಕೆಲಸ ಮಾಡುತ್ತಿದೆ. ಈ ಎರಡೂ ಪಕ್ಷಗಳಿಂದ ಕರ್ನಾಟಕದ ಅಭಿವೃದ್ಧಿ ಸಾಧ್ಯವಿಲ್ಲ. ನಿಮ್ಮ ಮಕ್ಕಳ ಭವಿಷ್ಯದ ಕುರಿತು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಕ್ಕೆ ಚಿಂತೆ ಇಲ್ಲ ಎಂದು ಮೋದಿ ಹೇಳಿದ್ದಾರೆ.
ಚಿತ್ರದುರ್ಗ 7 ಸುತ್ತಿನ ಕೋಟೆ ಎಂದೇ ಹೆಸರುವಾಸಿಯಾಗಿದೆ. ಅಂದರೆ ಅತ್ಯಂತ ಸುರಕ್ಷತೆಯ ಕೋಟೆ. ಬಿಜೆಪಿ ಕೂಡ 7 ಸುತ್ತಿನ ಸುರಕ್ಷತೆಯ ಕೋಟೆ ನಿರ್ಮಾಣ ಮಾಡಿದೆ. ನಾಗರೀಕರಿಗೆ ಬಿಜೆಪಿ 7 ಸುತ್ತಿನ ಭದ್ರತೆ ಕೋಟೆ ನೀಡಿದ್ದೇವೆ. ಪಿಎಂ ಅವಾಸ್ ಯೋಜನೆಯಡಿಯಲ್ಲಿ ಮನೆ ನೀಡುವ ಮೂಲಕ ಸುರಕ್ಷತೆ, ಮನಗೆ ಗ್ಯಾಸ್ , ನೀರು ನೀಡುವ ಸುರಕ್ಷತೆ ಯೋಜನೆ ನೀಡಲಾಗಿದೆ. ಗರೀಬ್ ಕಲ್ಯಾಣ್ ಯೋಜನೆ ಮೂಲಕ ಪಡಿತರ ನೀಡುವ ಸುರಕ್ಷತಾ ಕೋಟೆ, ಆಯುಷ್ಮಾನ್ ಭಾರತ್ ಸೇರಿದಂತೆ ಆರೋಗ್ಯ ಸುರಕ್ಷತೆ, ಜನಧನ ಬ್ಯಾಂಕ್ ಖಾತೆ ಹಾಗೂ ಮುದ್ರಾ ಯೋಜನೆ ಸೇರಿದಂತೆ ಸಾಲ ಸೌಲಭ್ಯ ಸುರಕ್ಷತೆ, ಎಲ್ಲರಿಗೂ ಭೀಮಾ ಯೋಜನೆ, ಜೀವನ ಜ್ಯೋತಿ ಸುರಕ್ಷಾ ಯೋಜನೆ ಅಟಲ್ ಪೆನ್ಶನ್ ಯೋಜನೆ ಸುರಕ್ಷತೆ, ತಾಯಂದರಿಗೆ ಸುರಕ್ಷತೆ ಯೋಜನೆ, ಎಲ್ಲರಿಗೂ ಸಾಮಾಜಿಕ ಭದ್ರತೆ ಹಾಗೂ ರಕ್ಷಣೆ ಕೋಟೆಯನ್ನು ಬಿಜೆಪಿ ಜನರಿಗೆ ನೀಡಿದೆ. ಸರ್ಜಿಕಲ್ ಸ್ಟ್ರೈಕ್, ಏರ್‌ಸ್ಟ್ರೈಕ್ ನಡೆದಾಗ ಸೈನ್ಯವನ್ನೇ ಪ್ರಶ್ನೆ ಮಾಡಿತ್ತು. ಕರ್ನಾಟಕದಲ್ಲಿ ಯಾವ ರೀತಿಯಲ್ಲಿ ಆತಂಕವನ್ನು ಸೃಷ್ಟಿಸಿತ್ತು. ಆದರೆ ಬಿಜೆಪಿ ಸರ್ಕಾರ ಆತಂಕವಾದಿ ವಿರುದ್ದ ಹೋರಾಟ ನಡೆಸುುತ್ತಿದೆ.ಕಾಂಗ್ರೆಸ್ ತುಷ್ಠೀಕರಣ ರಾಜಾಕಾರಣ ಮಾಡಿದೆ ಎಂದು ಮೋದಿ ಹೇಳಿದ್ದರು.