ನರ್ಗೀಸ್ ಮೊಹಮ್ಮದಿಗೆ ನೊಬೆಲ್ ಶಾಂತಿ ಪ್ರಶಸ್ತಿ

Advertisement

ನವದೆಹಲಿ: ವಿಶ್ವದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಈ ಬಾರಿ ಇರಾನ್ ಮಾನವ ಹಕ್ಕುಗಳ ಹೋರಾಟಗಾರ್ತಿ ನರ್ಗೀಸ್ ಮೊಹಮ್ಮದಿ ಅವರಿಗೆ ನೀಡಲಾಗಿದೆ.
ಇರಾನ್‌ನಲ್ಲಿ ಮಹಿಳೆಯರ ದಬ್ಬಾಳಿಕೆಯ ವಿರುದ್ಧದ ಹೋರಾಟ ಮತ್ತು ಮಾನವ ಹಕ್ಕುಗಳು ಮತ್ತು ಸ್ವಾತಂತ್ರ್ಯದ ಪ್ರಚಾರಕ್ಕಾಗಿ ನರ್ಗೀಸ್ ಮೊಹಮ್ಮದಿ ಈ ಗೌರವ ನೀಡಲಾಗಿದೆ.
ಸದ್ಯ ಇರಾನ್ ಜೈಲಿನಲ್ಲಿದ್ದಾರೆ ನರ್ಗೀಸ್ ಮೊಹಮ್ಮದಿಯವರಿಗೆ ಒಟ್ಟು 31 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ.