ನದಿಗೆ ಈಜಲು ಹೋಗಿದ್ದ ನಾಲ್ವರು ನೀರುಪಾಲು

Advertisement

ಬೆಳಗಾವಿ: ಪ್ರವಾಸಕ್ಕೆಂದು ಬಂದಿದ್ದ ಉತ್ತರ ಕನ್ನಡ ಜಿಲ್ಲೆಯ ಸಿರಿಗೇರೆ ಗ್ರಾಮದ ಯುವಕರು ಗೋಕಾಕ ತಾಲೂಕಿನ ಘಟಪ್ರಭಾ ಸಮೀಪದ ಧುಪದಾಳ ಜಲಾಶಯದಲ್ಲಿ ಈಜುತ್ತಿದ್ದಾಗ ಕೆಸರಿನಲ್ಲಿ ಸಿಲುಕಿ ನಾಲ್ವರು ಮೃತಪಟ್ಟ ಘಟನೆ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.
ಶಿರಸಿ ತಾಲೂಕಿನ ಮುಂಡಗೋಡ ಸಮೀಪದ ಹಳ್ಳಿಯಿಂದ ಬಂದಿದ್ದ 12 ಜನ ಯುವಕರ ಗುಂಪಿನಲ್ಲಿ ಆರೇಳು ಜನ ಈಜಾಡಲು ಹೋಗಿದ್ದರು. ಈ ವೇಳೆ ಈಜುವಾಗ ಜಲಾಶಯದ ಮಣ್ಣಿ ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ.‌ ಒಬ್ಬನನ್ನು ರಕ್ಷಿಸಲು ಹೋಗಿ ಇನ್ನೊಬ್ಬ ಹಿಂಬದಿಯಿಂದ ಹೋಗಿ ಐವರು ಮೃತಪಟ್ಟಿದ್ದಾರೆ. ಸಂತೋಷ ಈಡೀಗಾ ಗಾ (19), ಅಜಯಬಾಬು ಜೋಕಿ( 19), ಕೃಷ್ಣಾ ಜೋಕಿ (20) ಆನಂದ ವಿಷ್ಣು ಕೋಕರೆ (20) ಇದರಲ್ಲಿ ಒಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಮೃತದೇಹಗಳನ್ನು ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಘಟಪ್ರಭಾ ಕೆ ಎಚ್ ಐ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಘಟಪ್ರಭಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.