ತಮಿಳನಾಡು: ತಮಿಳು ನಟ ವಿಜಯಕಾಂತ್ (71)ಅವರು ಕೊರೊನಾದಿಂದ ಬಳುತ್ತಿದ್ದು. ಚಿಕಿತ್ಸೆ ಫಲಿಸದೇ ಇಂದು ಗುರುವಾರ ಬೆಳಗ್ಗೆ ಅವರು ನಿಧನರಾದರು.
ವಿಜಯಕಾಂತ್ ಅವರನ್ನ ಚೆನ್ನೈನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕಳೆದ ಕೆಲ ದಿನಗಳಿಂದ ಅವರು ವೆಂಟಿಲೇಟರ್ ಸಹಾಯದಲ್ಲಿ ಇದ್ದರು. ಈಗ ಚಿಕಿತ್ಸೆ ಫಲಕಾರಿ ಆಗದೇ ಅವರು ಮೃತಪಟ್ಟಿದ್ದಾರೆ. ಅವರಿಗೆ ಕೊರೊನಾ ಪಾಸಿಟಿವ್ ಆಗಿತ್ತು.ತಮಿಳು ನಟ ಹಾಗೂ ಡಿಎಂಡಿಕೆ ನಾಯಕ ವಿಜಯ್‍ಕಾಂತ್ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿಯುತ್ತಿದೆ.
ನಟ ವಿಜಯ್‍ಕಾಂತ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ: ಪ್ರಧಾನಿ ನರೇಂದ್ರ ಮೋದಿಯವರು ಸಾಮಾಜಿಕ ಜಾಲತಾಣದಲ್ಲಿ ನಟನ ಚಿತ್ರ ಹಂಚಿಕೊಂಡು ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ವಿಜಯ್‍ಕಾಂತ್ ಅವರ ನಿಧನ ಅತೀವ ದುಃಖ ತಂದಿದೆ. ತಮಿಳು ಚಲನಚಿತ್ರ ಪ್ರಪಂಚದ ದಂತಕಥೆಯಾಗಿರುವ ಅವರು ತಮ್ಮ ನಟನೆಯಿಂದಲೇ ಎಲ್ಲರ ಮನಗೆದ್ದಿದ್ದರು. ರಾಜಕೀಯ ನಾಯಕರಾಗಿ ಅವರು ಸಾರ್ವಜನಿಕ ಸೇವೆಗೆ ಬದ್ಧರಾಗಿದ್ದರು. ಇಂದು ಅವರ ನಿಧನ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ಆತ್ಮೀಯ ಸ್ನೇಹಿತರಾಗಿದ್ದರು. ನನ್ನೊಂದಿಗಿನ ಅವರ ಒಡನಾಟವನ್ನು ನಾನು ನೆನಪಲ್ಲಿಟ್ಟುಕೊಂಡಿದ್ದೇನೆ. ಈ ಸಂದರ್ಭದಲ್ಲಿ ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ. ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.