ನಟ ಚೇತನ್ ವೀಸಾ ರದ್ದು ಮಾಡಿದ ಕೇಂದ್ರ ಸರ್ಕಾರ

ಚೇತನ್‌
Advertisement

ಬೆಂಗಳೂರು: ಅಮೆರಿಕದ ಪೌರತ್ವ ಹೊಂದಿದ ಚೇತನ್‌ ಅಹಿಂಸಾ ಅವರು ಭಾರತದಲ್ಲಿ ಬಂದು ವಾಸಿಸಲು ನೀಡಲಾಗಿದ್ದ ಭಾರತೀಯ ಸಾಗರೋತ್ತರ ಪೌರತ್ವವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ವಿದೇಶಿಗರ ಪ್ರಾದೇಶಿಕ ನೋಂದಾವಣಿ ಕಚೇರಿಯಿಂದ ವತಿಯಿಂದ ನೋಟಿಸ್ ನಿನ್ನೆ ಸ್ವಿಕರಿಸಿದ್ದಾರೆ ಎನ್ನಲಾಗಿದೆ, ಅದು ಮಾ. 28ರಂದು ವಿದೇಶಿಗರ ಪ್ರಾಂತೀಯ ನೋಂದಾವಣೆ ಕಚೇರಿಯಿಂದ ಬಂದಿದ್ದ ನೋಟಿಸ್. ಅದರಲ್ಲಿ ಚೇತನ್ ಅಹಿಂಸಾ ಅವರ ಒಐಸಿ ರದ್ದುಗೊಳಿಸಿರುವುದನ್ನು ತಿಳಿಸಲಾಗಿದೆ. ಜೊತೆಗೆ, ‘ನಿಮಗೆ ನೀಡಲಾಗಿರುವ ಐಒಸಿ ಕಾರ್ಡನ್ನು ಇನ್ನು 15 ದಿನದಲ್ಲಿ ಕೇಂದ್ರ ಸರ್ಕಾರಕ್ಕೆ ಹಿಂದಿರುಗಿಸಬೇಕು’ ಎಂದು ಸೂಚಿಸಲಾಗಿದೆ. ಈ ಕುರಿತಂತೆ, ಟ್ವೀಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಚೇತನ್, ಏ. 14ರ ಅಂಬೇಡ್ಕರ್ ಜಯಂತಿಯಂದೇ, ಕೇಂದ್ರ ಗೃಹ ಸಚಿವಾಲಯವು ಭಾರತದಲ್ಲಿ ಉಳಿಯಲು ನನ್ನ ವೀಸಾವನ್ನು ರದ್ದುಗೊಳಿಸಿದೆ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅನಪೇಕ್ಷಿತ ಹಾಗೂ ಆಕ್ಷೇಪಾರ್ಹ ಬರಹಗಳನ್ನು ಹಾಕುವ ಮೂಲಕ, ಭಾರತದಲ್ಲಿ ಸಾಮಾಜಿಕ ಶಾಂತಿ ಹಾಗೂ ಸಾರ್ವಜನಿಕರ ನೆಮ್ಮದಿಗೆ ಧಕ್ಕೆ ತರುವುದನ್ನು ಗಂಭೀರವಾಗಿ ಪರಿಗಣಿಸಿ ಈ ನಿರ್ಧಾರ ಕೈಗೊಂಡಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ.