ಬೆಂಗಳೂರು : ನಟಿ ಶ್ರೀ ಲೀಲಾ ತಾಯಿ ಮೇಲೆ ಎಫ್ಐಆರ್ ದಾಖಲಾಗಿದ್ದು, ಅಲೆಯನ್ಸ್ ವಿವಿಯಲ್ಲಿ ಸಿಬ್ಬಂದಿ ಜೊತೆ ಗಲಾಟೆ ನಡೆದಿದೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
50 ಗೂಂಡಾಗಳ ಜತೆ ಅಲೆಯನ್ಸ್ ವಿವಿಗೆ ನುಗ್ಗಿ ಬೆದರಿಕೆ ಹಾಕಿದ್ದು, ಗನ್ ತೋರಿಸಿ ಬೆದರಿಸಿದ ಆರೋಪದ ಮೇಲೆ ಕೇಸ್ ದಾಖಲಾಗಿದೆ. ಈ ಸಂಬಂಧ ರಿಜಿಸ್ಟ್ರಾರ್ ನಿವೇದಿತಾ ಮಿಶ್ರಾ ದೂರು ನೀಡಿದ್ಧಾರೆ. ಶ್ರೀಲೀಲಾ ತಾಯಿ ಸ್ವರ್ಣ ಲತಾ ಸೇರಿ ಹಲವರ ವಿರುದ್ಧ ದೂರು ದಾಖಲಾಗಿದೆ. A-1: ಮಧುಕರ್ ಅಂಗೂರ್, A-2 ಸ್ವರ್ಣಲತಾ ಆರೋಪಿಗಳಾಗಿದ್ಧಾರೆ.
ಸ್ವರ್ಣಲತಾ ಕೋರ್ಟ್ ಆದೇಶ ಉಲ್ಲಂಘಿಸಿ ಅಲೆಯನ್ಸ್ ವಿವಿಗೆ ನುಗ್ಗಿದ ಆರೋಪ ಕೇಳಿಬಂದಿದೆ. ಸಿಬ್ಬಂದಿ ಬೆದರಿಸಿ, ಅಲ್ಲಿಂದ ಓಡಿಸುವ ಬೆದರಿಕೆ ಆರೋಪ ಮಾಡಿದ್ಧಾರೆ. ಮಧುಕರ್ ಅಂಗೂರ್, ಸ್ವರ್ಣಲತಾ ಮೇಲೆ ಗಂಭೀರ ಆರೋಪವಿದೆ. ಪ್ರಶ್ನೆ ಮಾಡಿದ್ದ ನಿವೇದಿತಾ ವಿರುದ್ಧ ಸ್ವರ್ಣಲತಾ ಅವಾಜ್ ಹಾಕಿದ್ದಾರೆ. ನಿವೇದಿತಾ ಅವಾಚ್ಯ ಶಬ್ಧ ಬಳಸಿದ ಆರೋಪ ಮಾಡಿದ್ಧಾರೆ. ನಾನೇ ಅಲಯೆನ್ಸ್ ವಿವಿಗೆ ಚಾನ್ಸಲರ್ ಎಂದು ಅವಾಜ್ ಹಾಕಿದ್ದು, ಇಲ್ಲಿಂದ ತೆರಳದಿದ್ದರೆ ಬಂದೂಕಿನಿಂದ ಸುಡುವೆ ಎಂದು ಬೆದರಿಸಿದ್ಧಾರೆ. ಸ್ವರ್ಣಲತಾ ಸೇರಿ ಹಲವರ ಮೇಲೆ ದೂರು ದಾಖಲಾಗಿದೆ. FIR ದಾಖಲಾಗುತ್ತಿದ್ದಂತೆ ಸ್ವರ್ಣಲತಾ ಎಸ್ಕೇಪ್ ಆಗಿದ್ದು, ಆನೇಕಲ್ ಪೊಲೀಸರು ಸ್ವರ್ಣಲತಾಗಾಗಿ ಬಲೆ ಬೀಸಿದ್ಧಾರೆ.