ಯಾವ ದೊಡ್ಡವರ ಸಂಗವನ್ನು ಮಾಡದೇ ಚಿಕ್ಕವರ ಮಧ್ಯದಲ್ಲಿ ತಾನು ಇದ್ದರೆ ತಾನು ಬಹಳ ದೊಡ್ಡವ ಎಂದು ಅನಿಸುತ್ತದೆ.
ದೊಡ್ಡವರ ಸಂಗವನ್ನು ನಾವು ಮಾಡಿದರೆ ಆ ಸಜ್ಜನರ ಸಹವಾಸ ಉಪದೇಶ ಜ್ಞಾನ ಆಚರಣೆ ನಿಷ್ಠೆ ಮತ್ತು ತಪಸ್ಸುಗಳು ನೋಡಿದರೆ ನನ್ನ ಜ್ಞಾನ ನನ್ನ ಆಚರಣೆಗಳು ಎಷ್ಟು ಚಿಕ್ಕವು ಎಂದು ಅನಿಸಲು ಪ್ರಾರಂಭಿಸುತ್ತದೆ. ಅವರೆಲ್ಲ ಸಾಧನೆ ಮುಂದೆ ನನ್ನ ಸಾಧನೆ ಅಣುಮಾತ್ರ ಎಂಬ ಸತ್ಯದ ಅರಿವಾಗುತ್ತದೆ. ದೇವರು ನಮಗೆ ಏನು ಮಾಡಿದ್ದಾನೆ ಎಂದು ನೆನೆಸಿದರೆ ಸಾಕು. ಅಷ್ಟಕ್ಕೇ ಅನುಗ್ರಹ ಮಾಡುತ್ತಾನೆ. ಮನಸ್ಸು ಭಕ್ತಿಯಿಂದ ತೊಯ್ಯಬೇಕು. ನಾನು ಭಕ್ತಿಯಿಂದ ಸ್ಮರಣೆ ಮಾಡಿದೆ ಅದಕ್ಕೆ ದೇವರು ಅನುಗ್ರಹಿಸಿದ ಎಂದು ಒಂದು ಕ್ಷಣ ಮನಸ್ಸಿನಲ್ಲಿ ಬಂದು ಹೋಗುತ್ತದೆ. ನಾವು ಹೇಗೆ ಇರುತ್ತೇವೆ ಎಂದು ಅಂದುಕೊಳ್ಳೋಣ. ನಾನೆಲ್ಲ ಮಾಡಿದ ಸಾಧನೆಗೆ ದೇವರು ಮಾಡಿದ ಎಂದು ಆಲೋಚಿಸುತ್ತೇವೆ. ನಮಗೆ ಅರಿವಿಲ್ಲದಂತೆ ಮಾತನಾಡುತ್ತೇವೆ. ಆದರೆ ಮನದಾಳದ ಒಳಗೆ ನಾನು ಮಾಡಿದೆ ನನ್ನ ಶಕ್ತಿ ನನ್ನ ಯುಕ್ತಿಯಿಂದ ಇದೆಲ್ಲ ಸಾಧ್ಯವಾಯಿತು ಎಂದು ಆಲೋಚಿಸುತ್ತೇವೆ. ಸಂಸ್ಮರಣಾತ.. ಎಂಬ ಭಾವ ಮೂಡಬೇಕು. ಸರ್ವಸಮರ್ಪಣ ಪೂರ್ಣವಾದ ಸ್ಮರಣೆ ಇರಬೇಕು ಎಂದು ಋಷಿಗಳ ಹೇಳುತ್ತಾರೆ. ನಂದೇನಿದೇ ನಿಂದೇ ಇದೆಲ್ಲವೂ ಎಂಬ ಸ್ಮರಣೆ ಬರಬೇಕು. ಇಲ್ಲದಿದ್ದರೆ ಅದು ದೇವರ ಸ್ಮರಣೆ ಅಲ್ಲ ನಮ್ಮ ಸ್ಮರಣೆ ಆಗುತ್ತದೆ ಆತ್ಮಸ್ಮರಣೆ ಆತ್ಮ ಪ್ರಸಂಶೆ ಆಗುತ್ತದೆ. ನಿಷ್ಕಲ್ಮಶಾಹ ಭವಿಷ್ಯ ಯಮಃ… ಭಗವಂತನ ಸ್ಮರಣೆ ಮಾಡುವುದರಿಂದ ನಮ್ಮ ಮನಸ್ಸಿನಲ್ಲಿರುವ ಕಲ್ಮಶವೆಲ್ಲ ಹೋಗುತ್ತದೆ ಹಾಗಂತ ಯೋಚನೆ ಮಾಡಿದರೆ ಇನ್ನಷ್ಟು ಕಳೆದು ಕಳೆದು ಶುದ್ದರನ್ನಾಗಿ ಮಾಡುತ್ತಾನೆ ಪರಮಾತ್ಮ.