ಧಾರವಾಡ: ಮತದಾನ ಜಾಗೃತಿಗಾಗಿ ಚುನಾವಣಾ ಆಯೋಗ ಪೇಡಾ ಮತಗಟ್ಟೆ ರೂಪಿಸಿದೆ, ಆದರೆ ಪೇಡಾ ಆಸೆಗಾಗಿ ಇಲ್ಲಿ ಬಂದರೆ ನಿರಾಸೆಯಾಗುವುದು ಖಚಿತ. ಏಕೆಂದರೆ ಇಲ್ಲಿ ಪೇಡಾ ಫೋಟೊಗಳು, ಇತಿಹಾಸದ ಮಾಹಿತಿ ಮಾತ್ರ ಸಿಗುತ್ತವೆಯೋ ಹೊರತು ನಿಜವಾದ ಪೇಡಾ ಸಿಗುವುದಿಲ್ಲ.
ಧಾರವಾಡದ ಪ್ರಸಿದ್ಧ ಸಿಹಿ ತಿಂಡಿ ಪೇಡಾ ಖ್ಯಾತಿಗಾಗಿ ಆಯೋಗ ನಗರದ ಪ್ರಜಂಟೇಶನ್ ಶಾಲೆಯ ಮತಗಟ್ಟೆಯನ್ನು “ಪೇಡಾ ಮತಗಟ್ಟೆ’ ಮಾಡಿರುವುದು ಗಮನ ಸೆಳೆದಿದೆ.
ಮತಗಟ್ಟೆಯ ಆವರಣದಲ್ಲಿ ಪೇಡಾದ ಆಕರ್ಷಕ ಚಿತ್ರಗಳನ್ನು ಅಂಟಿಸಲಾಗಿದೆ. ಧಾರವಾಡ ಪೇಡಾ ಇತಿಹಾಸ ಕುರಿತು ಮಾಹಿತಿ ಫಲಕಗಳನ್ನು ಅಳವಡಿಸಲಾಗಿದೆ. ಧಾರವಾಡದ ರಾಷ್ಟ್ರಪ್ರಸಿದ್ಧ ಸಿಹಿ ತಿನಿಸು ಪೇಡಾ ಹೆಸರಿನಲ್ಲಿ ಮತಗಟ್ಟೆ ಮಾಡಿದ್ದು ವಿಶೇಷ.
