ಧಾರವಾಡದಲ್ಲಿ ಡಬಲ್ ಮರ್ಡರ್

ಕೊಲೆ
Advertisement


ಧಾರವಾಡ: ಇಲ್ಲಿಯ ಕಮಲಾಪುರದಲ್ಲಿ ಗುರುವಾರ ತಡರಾತ್ರಿ ರಿಯಲ್‌ ಎಸ್ಟೇಟ್ ಉದ್ಯಮಿ ಮತ್ತು ಆತನ ಸಹಚರನನ್ನು ಮಾರಕಾಸ್ತ್ರಗಳಿಂದ‌ ಕೊಚ್ಚಿ ಕೊಲೆ ಮಾಡಲಾಗಿದೆ.
ಮಹಮ್ಮದ ಕುಡಚಿ, ಕೊಲೆಯಾದ ರಿಯಲ್ ಎಸ್ಟೇಟ್ ಉದ್ಯಮಿ ಎಂದು ತಿಳಿದಿದ್ದು, ಮತ್ತೋರ್ವನ ಮಾಹಿತಿ ಕಲೆಹಾಕಲಾಗುತ್ತಿದೆ.
ಕುಡಚಿ ಮನೆ ಎದುರು ಕುಳಿತಾಗ ಏಕಾಏಕಿ ಆಗಮಿಸಿದ ಗುಂಪು ಮನೆಯ ಒಳಗೆ ನುಗ್ಗಿ ಕೊಡಲಿ ಸೇರಿದಂತೆ ಇತರೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಮತ್ತೋರ್ವನ ಶವ ಅನತಿ ದೂರದಲ್ಲಿಯೇ ರಕ್ತಸಿಕ್ತ ಸ್ಥಿತಿಯಲ್ಲಿ ದೊರೆತಿದೆ. ಉಪನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.