ಕುಷ್ಟಗಿ: ಧರ್ಮ ದಂಗಲ್‌ನಿಂದ ಬಿಜೆಪಿಯ ಸಿ.ಟಿ. ರವಿ ಅಧಿಕಾರಕ್ಕೆ ಬಂದಿದ್ದಾರೆ. ಅವರಿಂದ ಅಭಿವೃದ್ಧಿ ಕಾರ್ಯ ಏನೂ ಆಗಿಲ್ಲ. ಯಾವುದೇ ಯೋಜನೆ ಜಾರಿಗೆ ಬಂದರೂ ನಾವು ಮಾಡಿದ್ದೇವೆ ಎಂದು ಬಿಜೆಪಿಯವರು ಹೇಳಿಕೊಳ್ಳುತ್ತಾರೆ. ಬಿಜೆಪಿ ಅವರಿಗೆ ಧರ್ಮ ಬಿಟ್ಟರೆ ಏನೂ ಗೊತ್ತಿಲ್ಲ. ಧರ್ಮದ ಹೆಸರಿನಲ್ಲಿ ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಆರೋಪಿಸಿದರು.
ಪಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಸಾಮಾನ್ಯರಿಗೆ ಒಳ್ಳೆಯದಾಗುವ ಕೆಲಸ ಮಾಡಬೇಕು. ನಾವು ಕೂಡ ಹಿಂದುಗಳೇ. ಮುಂದಿನ ದಿನಮಾನಗಳಲ್ಲಿ ಕಾಂಗ್ರೆಸ್ ವತಿಯಿಂದ ಸಿ.ಟಿ. ರವಿ ಅವರ ವಿರುದ್ಧ ಹೋರಾಟ ಮಾಡಲಾಗುತ್ತದೆ ಎಂದರು. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಜನರ ಮನಸ್ಸನ್ನು ಒಡೆದಾಳುವ ನೀತಿ ಬಿತ್ತಿದ್ದಾರೆ. ಸಿ.ಟಿ. ರವಿ ಅರಿತುಕೊಂಡು ಮಾತನಾಡಬೇಕು. ಬಾಯಿ ಇದೆ ಎಂದು ಏನೇನೋ ಮಾತಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.