ಧರೆ ಹೊತ್ತಿ ಉರಿದೊಡೆ…!!

ಗುರುಬೋಧೆ
Advertisement

ರಾಜಕಾರಣದಲ್ಲಿ ಅಧರ್ಮದ ನಡೆ ಹೆಚ್ಚಾಗುತ್ತಿದೆ. ಸತ್ಯ ಹಾಗೂ ಜನಪರ ಆಡಳಿತ ನಡೆಸುವ ರಾಜಕಾರಣಿಗಳ ಸಂಖ್ಯೆ ಕಡಿಮೆಯಾಗುತ್ತಿದೆ.
ಮತ ಗಳಿಕೆಯೇ ಮುಖ್ಯವಾಗಿ ಅಧಿಕಾರಕ್ಕೇರುವ ವಿಷಯ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿರುವುದರಿಂದ ಅಶಾಂತಿ ವಾತಾವರಣ ಸೃಜನೆಯಾಗಿದೆ. ಹಲವಾರು ಕಹಿ ಘಟನೆಗಳು ಪ್ರತಿನಿತ್ಯ ವರದಿಯಾಗುತ್ತಿವೆ. ಇದಕ್ಕೆಲ್ಲಾ ಪ್ರಮುಖ ಕಾರಣ ಅಧಿಕಾರದ ಗದ್ದುಗೆ ಏರುವ ಧಾವಂತ ಮುಖ್ಯವಾಗಿರುವ ಹಿನ್ನೆಲೆಯಲ್ಲಿ ಅತ್ಯಂತ ಸೂಕ್ಷ್ಮವಾಗಿ ವಿದ್ಯಾಮಾನಗಳು ನಡೆದು ಶಾಂತಿಯ ಬೀಡಾಗಿದ್ದ ಕರ್ನಾಟಕ ಅಶಾಂತಿಯ ಗೂಡಾಗುತ್ತಿದೆ. ಇದಕ್ಕೆಲ್ಲಾ ಕಾರಣ ಒಂದು ದೊಡ್ಡ ಸಮುದಾಯಕ್ಕೆ ಸೂಕ್ತ ಶಿಕ್ಷಣ ನೀಡದಿರುವುದೇ ಆಗಿದೆ. ಈ ದೇಶವನ್ನು ಈ ರಾಜ್ಯವನ್ನು ಸುದೀರ್ಘ ಕಾಲ ಆಡಳಿತ ನಡೆಸಿದ ಯಾವುದೇ ಪಕ್ಷದ ಸರ್ಕಾರ ಕೆಲವು ಜಾತಿ, ಧರ್ಮಗಳ ಜನರಿಗೆ ಸೂಕ್ತ ಶಿಕ್ಷಣ ದೊರೆಯುವಂತೆ ನೋಡಿಕೊಂಡು ಆ ಮೂಲಕ ದೇಶದ ಆಗು-ಹೋಗುಗಳಲ್ಲಿ ಅವರನ್ನು ಒಳಗೊಳ್ಳುವ ಕಾರ್ಯವನ್ನು ಮಾಡದೇ ಹೋಗಿದ್ದರಿಂದ ದೇಶದ ಕೆಲವು ಗುಂಪಿನ ಜನರಲ್ಲಿ ನೆರೆಯ ಪಾಕಿಸ್ತಾನದ ಬಗ್ಗೆ ವಿನಾಕಾರಣ ಮಮಕಾರ ಮೈದಳೆಯಲು ಕಾರಣವಾದರೆ ಇನ್ನು ಕೆಲವರಿಗೆ ಸುಳ್ಳು ಸಿದ್ಧಾಂತಗಳ ಮೂಲಕ ಬುದ್ಧಿವಂತರು ಎಂದು ಕರೆಸಿಕೊಳ್ಳುವ ಧಾವಂತ.
ಹೀಗಾಗಿ ನಾಡಿನಲ್ಲಿ ಅನೇಕ ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ಆಡಳಿತ ವಿಪಕ್ಷಗಳ ನಡುವೆ ಆರೋಪ, ಪ್ರತ್ಯಾರೋಪಗಳ ಸರಣಿ ಮುಂದುವರಿದಿದೆ. ಇತ್ತೀಚೆಗೆ ಕೊಡಗಿನಲ್ಲಿ ವಿಪಕ್ಷ ನಾಯಕರ ಮೇಲೆ ಸಹ್ಯವಲ್ಲದ ನಡವಳಿಕೆ ಪ್ರದರ್ಶಿಸಿರುವುದೂ ಕೂಡ ಯಾರೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಈ ರೀತಿಯ ರಾಜಕೀಯ ವಿಪ್ಲವಗಳೆಲ್ಲಾ ಕೊನೆಗಾಣಬೇಕು. ರಾಜ್ಯದಲ್ಲಿ ಶಾಂತಿ ಹಾಗೂ ನೆಮ್ಮದಿಯ ವಾತಾವರಣ ಸೃಷ್ಟಿಯಾಗಬೇಕು.

ಗುರುಬೋಧೆ