ಧರೆಗಿಳಿದ ದುರ್ಗಾದೇವಿ….

ದುರ್ಗಾದೇವಿ
Advertisement

ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ಹದಗೆಟ್ಟಿರುವ ರಸ್ತೆ ಅಭಿವೃದ್ಧಿಗೆ ಭಕ್ತರು ಬೇಡಿಕೊಂಡ ಹಿನ್ನೆಲೆಯಲ್ಲಿ ಸಾಕ್ಷಾತ್ ಆ ದುರ್ಗಾದೇವಿಯೇ ಧರೆಗಿಳಿದು ರಸ್ತೆ ಪರಿಶೀಲನೆ ಮಾಡಿದ್ದಾರೆ.

ಅರೇ ಇದೇನು ಎನ್ನಬೇಡಿ.. ಹುಬ್ಬಳ್ಳಿಯ ತಗ್ಗು ಗುಂಡಿಗಳು ಬಿದ್ದ ರಸ್ತೆಯ ವಾಸ್ತವ ತೆರೆದಿಡುವ ನಿಟ್ಟಿನಲ್ಲಿ ಸ್ವತಃ ದುರ್ಗಾದೇವಿಯೇ ತಗ್ಗು ಗುಂಡಿಗಳನ್ನು ಪರಿಶೀಲಿಸಿದ್ದು, ಹುಬ್ಬಳ್ಳಿ ಬದಲಾಗಬೇಕಿದೆ. ರಸ್ತೆ, ಸ್ವಚ್ಛತೆ, ಮೂಲಸೌಕರ್ಯ, ವಿದ್ಯುತ್ ಎಲ್ಲವೂ ಅಭಿವೃದ್ಧಿ ಆಗಬೇಕಿದೆ. ಮುಂದಿನ ನವರಾತ್ರಿಗೆ ಮರಳಿ ಬರುತ್ತೇನೆ ಬದಲಾವಣೆ ಆಗಿರುತ್ತದೆ ಎಂದು ಆಶೀರ್ವಾದ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಕಾಂಗ್ರೆಸ್ ಮುಖಂಡ ಈ ಕುರಿತು ರಜತ್ ಉಳ್ಳಾಗಡ್ಡಿ ಮಠ ಅವರು ರಸ್ತೆಗಳ ಪರಿಸ್ಥಿತಿಯನ್ನು ದೇವತೆಯೇ ಬಂದು ನೋಡುವಂತಾಗಿದೆ. ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ. ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕಿದ್ದಾರೆ. ಈಗಾಲಾದರೂ ರಸ್ತೆ ಅಭಿವೃದ್ಧಿಯಾಗಲಿ ಎಂದಿದ್ದಾರೆ.

ದುರ್ಗಾದೇವಿ