ದೊಣ್ಣೆಯಿಂದ ಹೊಡೆದು ಪತಿಯ ಕೊಲೆ

ಕೊಲೆ
Advertisement

ಚಿಕ್ಕಮಗಳೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿಯೇ ಪತಿಯನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ ಘಟನೆ ಚಿಕ್ಕಮಗಳೂರು ನಗರದ ಗೌರಿ ಕಾಲುವೆಯಲ್ಲಿ ನಡೆದಿದೆ.

ಕಳೆದ ರಾತ್ರಿ ಗಂಡ ಹೆಂಡತಿಯ ನಡುವೆ ಜಗಳವಾಗಿದ್ದು ಮಾತಿಗೆ ಮಾತು ಬೆಳೆದು ಪತ್ನಿ ಭಾರತಿ ಸುರೇಶ್ ಎಂಬ ಗಂಡನನ್ನು ಹೊಡೆದು ಹತ್ಯೆ ಮಾಡಿದ್ದಾಳೆ. ಬಸವನಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಘಟನೆವಿವರ : ಗಂಡ ಹೆಂಡತಿ ನಡುವಿನ ವಿರಸ ಕೊಲೆಯಲ್ಲಿ ಅಂತ್ಯವಾದ ಘಟನೆ ಚಿಕ್ಕಮಗಳೂರು ನಗರದ ಗೌರಿ ಕಾಲುವೆ ಬಡಾವಣೆಯಲ್ಲಿ ನಡೆದಿದೆ. ಸುರೇಶ್(53) ಮೃತಪಟ್ಟ ಪತಿಯಾಗಿದ್ದು, ಆತನ ಪತ್ನಿ ಭಾರತಿ ಎಂಬಾಕೆ ದೊಣ್ಣೆಯಿಂದ ತಲೆಗೆ ಹೊಡೆದು ಕೊಂದಿದ್ದಾಳೆ.

ಕಳೆದ ರಾತ್ರಿ ಮನೆಯಲ್ಲಿ ಗಂಡ ಹೆಂಡತಿ ನಡುವೆ ವಿಪರೀತ ಜಗಳವಾಗಿದ್ದು, ಮರಗೆಲಸ ಮಾಡಿಕೊಂಡು ಮನೆಗೆ ಬಂದ ಪತಿ ಸುರೇಶ್ ಜೊತೆ ಭಾರತಿ ಹೊಡೆದಾಟಕ್ಕೆ ಇಳಿದಿದ್ದಾಳೆ. ಈ ವೇಳೆ ಜಗಳ ವಿಕೋಪಕ್ಕೆ ತಿರುಗಿ ಮನೆಯಲ್ಲಿ ಇದ್ದ ಮರದ ದೊಣ್ಣೆ ತೆಗೆದುಕೊಂಡು ಬಲವಾಗಿ ತಲೆಗೆ ಬಾರಿಸಿದ್ದಾಳೆ.

ಈ ವೇಳೆ ಕುಸಿದು ಬಿದ್ದ ಸುರೇಶ ಹೆಡ್ ಇಂಜ್ಯುರಿ ಉಂಟಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಅಸುನೀಗಿದ್ದಾನೆ.