ದೈವಗಳ ಆಶೀರ್ವಾದ – ‘ವರಾಹ ರೂಪಂ’ಗೆ ಗೆಲುವು

kantara
Advertisement

ಮಂಗಳೂರು: ವರಾಹ ರೂಪಂ ಹಾಡಿನ ಮೇಲೆ ಕೃತಿ ಚೌರ್ಯದ ಆರೋಪ ಮಾಡಿದ್ದ ಥೈಕ್ಕುಡಂ ಬ್ರಿಡ್ಜ್ ಗೆ ಸೋಲಾಗಿದ್ದು, ಕಾಂತಾರ ಚಿತ್ರತಂಡ ಕೇಸ್‌ನ್ನು ಗೆದ್ದಿದೆ ಎಂದು ಚಿತ್ರದ ನಟ ನಿರ್ದೇಶಕ ರಿಷಬ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಯೂಟ್ಯೂಬ್‌ನಲ್ಲಿ ಹಾಡು ಮತ್ತೆ ಕಾಣಿಸಿಕೊಂಡಿದೆ.
ʼಕಾಂತಾರ’ ಚಿತ್ರದಲ್ಲಿರುವ ವರಾಹ ರೂಪಂ ಹಾಡನ್ನು ಕದ್ದಿದ್ದಾರೆ ಎಂದು ಆರೋಪಿಸಿ ಕೇರಳದ ‘ತೈಕ್ಕುಡಂ ಬ್ರಿಡ್ಜ್’ ಬ್ಯಾಂಡ್ನವರು ಕೋರ್ಟ್‌ಗೆ ಹೋಗಿದ್ದರು. ಈ ಹಿನ್ನಲೆ ಕೇರಳದ ಕೋಝಿಕೊಡ್ ನ್ಯಾಯಾಲಯ ಅರ್ಜಿ ವಿಚಾರಣೆ ನಡೆಸಿ ‘ವರಾಹ ರೂಪಂ..’ ಹಾಡನ್ನು ಪ್ರಸಾರ ಮಾಡದಂತೆ ಮಧ್ಯಂತರ ತಡೆಯಾಜ್ಞೆ ಆದೇಶ ಹೊರಡಿಸಿತ್ತು. ಈ ಸಂಬಂಧ ‘ಹೊಂಬಾಳೆ ಫಿಲ್ಮ್ಸ್’ ಮೇಲ್ಮನವಿ ಸಲ್ಲಿಕೆ ಮಾಡಿತ್ತು. ಈ ವೇಳೆ ಕೋರ್ಟ್ ತೀರ್ಪು ಕಾಂತಾರದ ಕಡೆಯಾಗಿಯತ್ತು. ಇದನ್ನು ಪ್ರಶ್ನಿಸಿ ತೈಕ್ಕುಡಂ ಬ್ರಿಡ್ಜ್ ಕೇರಳ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ ಸೋಮರಾಜನ್ ಅವರಿದ್ದ ಪೀಠ, ಕೋಝಿಕೊಡ್ ಜಿಲ್ಲಾ ಆದೇಶವನ್ನು ತಡೆ ಹಿಡಿದಿದೆ. ಆದರೆ ಇದೀಗ ರಿಷಬ್ ಶೆಟ್ಟಿ ಟ್ವೀಟ್ ಮಾಡಿದ್ದು ದೈವಾನು ದೈವಗಳ ಆಶೀರ್ವಾದ ಹಾಗೂ ಜನರ ಅಭಿಮಾನದಿಂದ ವರಾಹರೂಪಂ ಕೇಸ್ ಗೆದ್ದಿದ್ದೇವೆ. ಜನರ ಕೋರಿಕೆಯನ್ನು ಪರಿಗಣಿಸಿ ಅತಿ ಶೀಘ್ರದಲ್ಲಿ ಒಟಿಟಿಯಲ್ಲಿ ಹಾಡನ್ನು ಬದಲಾಯಿಸಲಿದ್ದೇವೆ ಎಂದಿದ್ದಾರೆ.