ದೇಶದ ಮರ್ಯಾದೆಗೆ ಧಕ್ಕೆ ತಂದ ರಾಹುಲ್:‌ ಸ್ಮೃತಿ

ಸ್ಮೃತಿ
Advertisement

ನವಲಗುಂದ: ಕೇಂದ್ರ ಸಚಿವ ಸ್ಮೃತಿ ಇರಾನಿ, ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಸಿ.ಸಿ.ಪಾಟೀಲ ಹಾಗೂ ಗೋವಿಂದ ಕಾರಜೋಳ ನೇತೃತ್ವದಲ್ಲಿ ನವಲಗುಂದ ಪಟ್ಟಣದಲ್ಲಿ ವಿಜಯಸಂಕಲ್ಪ ಯಾತ್ರೆ ನಡೆಯಿತು.
ಕೇಂದ್ರ ಸಚಿವ ಸ್ಮೃತಿ ಇರಾನಿ ಮಾತನಾಡಿ, ಭಾರತ ದೇಶ ಪುಣ್ಯ ಭೂಮಿ ನಮ್ಮ ದೇಶದ ಆಂತರಿಕ ವಿಷಯಗಳನ್ನ ಬೇರೆಡೆ ಹೇಳಿ ಅವಮಾನ ಮಾಡುತ್ತಿದ್ದಾರೆ. ಅಂತಹ ರಾಹುಲ್ ಗಾಂಧಿ ಸ್ವಾಭಿಮಾನ ಸಾರ್ವಭೌಮತೆಯನ್ನು ಸಾರುತ್ತಿರುವ ಈ ದೇಶಕ್ಕೆ ಮಾಡಿದ ಅವಮಾನ. ದೇಶದ ಏಕತೆಯ ಹಾಗೂ ವರ್ಚಸ್ಸು ಹಾಗೂ ರಾಷ್ಟ್ರವಾದಕ್ಕಾಗಿ ದುಡಿಯುತ್ತಿರುವ ನನ್ನ ಬಿಜೆಪಿಯ ಒಬ್ಬ ಒಬ್ಬ ಕಾರ್ಯಕರ್ತರಿಗೆ ಹೇಳುವುದೇನೆಂದರೆ ಈ ದೇಶದ ಮರ್ಯಾದೆಗೆ ಧಕ್ಕೆ ತಂದ ಆ ಕಾಂಗ್ರೆಸ್ ಪಕ್ಷದ ವ್ಯಕ್ತಿಗೆ ಯಾವುದೇ ಕಾರಣಕ್ಕೂ ಈ ಕ್ಷೇತ್ರದಲ್ಲಿ ಜನತೆಯ ಸಮರ್ಥನೆ ಸಿಗಬಾರದು ಎಂದರು.
ಈ ಸಂದರ್ಭದಲ್ಲಿ, ಬಸವರಾಜ ಕುಂದಗೋಳಮಠ, ಅಣ್ಣಪ್ಪ ಭಾಗಿ, ರಾಯನಗೌಡ ಪಾಟೀಲ, ಶಂಕರಗೌಡ ಮುದಿಗೌಡ್ರ, ಸಿದ್ದಪ್ಪ ಜನ್ನರ, ಜಯಪ್ರಕಾಶ್ ಬದಾಮಿ, ಅನೇಕ ಕಾರ್ಯಕರ್ತರು ಹಾಜರಿದ್ದರು.