ದೇವರ ಸ್ಮರಣೆ ಸಕಲ ಪಾಪಗಳ ಪರಿಹಾರ

PRATHAPPHOTOS.COM
Advertisement

ಶಾಪವನ್ನು ಉಶ್ಯಾಪವನ್ನಾಗಿಸಿಕೊಳ್ಳಲು ಪರೀಕ್ಷಿತರಾಜ ತಾನು ಶುಕಾಚಾರ್ಯರ ಬಳಿಯಲ್ಲಿ ಭಾಗವತ ಕೇಳುತ್ತಾನೆ.
ಮನುಷ್ಯರಲ್ಲಿನ ಪಾಪ ಕರ್ಮಗಳಿಗೆ ಮುಕ್ತಿ ಯಾವದರಿಂದ? ಎಂದು ಕೇಳಿದಾಗ ಅದಕ್ಕೆ ಶುಕಾಚಾರ್ಯರು ಪರೀಕ್ಷಿತನನ್ನು ಕುರಿತು ಹೇಳುತ್ತಾರೆ.
ನಾವೆಲ್ಲರೂ ಜನ್ಮಜನ್ಮಾಂತರಗಳ ಪಾಪಗಳ ಪ್ರತಿಫಲವಾಗಿ ಇವತ್ತು ನಾನಾ ದುಃಖಗಳನ್ನು ರೋಗಗಳನ್ನು ಅನುಭವಿಸಿದ್ದೇವೆ. ರೋಗದ ಮೂಲವನ್ನು ತಿಳಿದುಕೊಂಡು ಹೇಗೆ ರೋಗ ಪರಿಹಾರ ಮಾಡಿಕೊಳ್ಳುವ ಪ್ರಯತ್ನ ಮಾಡಿಕೊಳ್ಳುತ್ತೇವೋ ಹಾಗೆಯೇ ನಮ್ಮೆಲ್ಲರ ದುಃಖಗಳ ಮೂಲವನ್ನು ತೆಗೆದುಕೊಂಡು ಅಂತಹ ಪಾಪಗಳನ್ನು ಕಳೆದುಕೊಳ್ಳುವ ಪ್ರಯತ್ನವನ್ನು ನಾವು ಮಾಡಿದರೆ ನಾವು ಒಳ್ಳೆಯ ಮನುಜರಾಗುತ್ತವೆ. ನಮ್ಮೆಲ್ಲರ ದುಃಖದ ಮೂಲ ನಾವೇ ಜನ್ಮಂತರದಲ್ಲಿ ಮಾಡಿದ ಕರ್ಮಗಳೇ ದುಃಖಗಳು ಮಾಡಿದ ಕರ್ಮಕ್ಕೆ ಕಸಿವಿಸಿ ಅನುಭವಿಸಿದರೆ ಅದೇ ಮೂಲ ಪರಿಹಾರ. ಮನಬಂದಂತೆ ಕರ್ಮಗಳನ್ನು ಮಾಡಿ, ಅದನ್ನು ಕಳೆಯಲು ಹೋಮ ಯಾಗಾದಿಗಳನ್ನು ಮಾಡಿದರೆ ಪ್ರಾಯಶ್ಚಿತ ಕಳೆಯುವುದಿಲ್ಲ. ಮನಸ್ಸಿನಿಂದ ಪ್ರಯತ್ನ ತಗೊಂಡು ಇನ್ನೊಮ್ಮೆ ಇತರದ ಪಾಪಗಳನ್ನು ಮಾಡುವುದಿಲ್ಲ ಎಂದು ಪ್ರಾಯಶ್ಚಿತವನ್ನು ಮಾಡಿದರೆ ಮಾತ್ರ ಭಗವಂತ ಕ್ಷಮಿಸುತ್ತಾನೆ. ಅಶ್ವಮೇಧ ಯಜ್ಞಗಳನ್ನೇ ಕೆಲವೊಂದು ಪಾಪಗಳಿಗೆ ದೊಡ್ಡ ಪ್ರಾಯಶ್ಚಿತವನ್ನಾಗಿ ಹೇಳಿದ್ದಾರೆ. ಭಕ್ತಿಯಿಂದ ಹರಿನಾಮ ಸಂಕೇತನವೆಂಬ ಸಣ್ಣ ಮನಃಪೂರ್ವಕವಾಗಿ ಮಾಡಿದರೆ ಪಾಪಗಳಿಗೆ ಪರಿಹಾರ ಉಂಟು.
ಪರಿನಾಮಸ್ಮರಣೆ ಮಾಡುವುದನ್ನು ಬಿಟ್ಟು ಹಾಳು ಹರಟೆಯಲ್ಲಿ ಕಾಲ ಕಳೆಯುವ ಮನುಷ್ಯನಿಗೆ ಅಂತಹ ಪರಿಣಾಮ ಸ್ಮರಣೆಯನ್ನು ಮಾಡುವ ಯೋಗ ಬೆರಳಿನ ಎಷ್ಟು ಜನಕ್ಕೆ ಮಾತ್ರ ಲಭ್ಯವ ಇದೆ ಅದರಿಂದ ಕೋಟಿ ಕೋಟಿ ಪಾಪಗಳನ್ನು ತೊಳೆದು ಹಾಕಬಹುದು.
ಧರ್ಮಶಾಸ್ತ್ರದ ದೊಡ್ಡ ಗ್ರಂಥಗಳು ಪ್ರಾಯಶ್ಚಿತ ಖಂಡ ಎಂದು ದೊಡ್ಡ ಭಾಗ ಇರುತ್ತೆ. ಹಂತ ಹಂತವಾಗಿ ಪ್ರಾಯಶ್ಚಿತ ಖಂಡವನ್ನು ವಿವರಿಸುವ ಧರ್ಮಶಾಸ್ತ್ರದ ವಿಭಾಗ ವಿಸ್ಕೃತವಾದದ್ದು. ಶ್ರೇಷ್ಠ ಪ್ರಾಯಶ್ಚಿತ್ತ ಶ್ರೀಹರಿಯ ಸ್ಮರಣೆ ಎಂದು ಅವರು ಹೇಳಿದರು. ಭಗವಂತನ ನಾಮಸ್ಮರಣೆಯಿಂದಲೇ ಏನೆಲ್ಲ ಪರಿಹಾರ ಮಾಡುವ ಶಕ್ತಿ ಇದೆ. ಭಗವಂತನ ನಾಮದ ಬಲ ಇದ್ದರೆ ಸಾಕು ಎಂದು ದಾಸರು ಇದನ್ನೇ ಕೊಂಡಾಡಿದ್ದಾರೆ.